ಸ್ನೇಹಿತರೇ, ಅವರವರ ವಿಶೇಷ ವೈಶಿಷ್ಟ್ಯಗಳಿಂದ ಹೆಸರುವಾಸಿಯಾದ ಅನೇಕ ದೇಶಗಳು ವಿಶ್ವದಾದ್ಯಂತ ಇವೆ. ಪ್ರಪಂಚದ ಬಹುತೇಕ ಎಲ್ಲ ದೇಶಗಳಲ್ಲಿ ನೀವು ದೇವಾಲಯ ಅಥವಾ ಮಸೀದಿಯನ್ನು ಸುಲಭವಾಗಿ ಕಾಣುತ್ತೀರಿ ಆದರೆ ಸ್ನೇಹಿತರೇ, ಒಂದೇ ದೇವಾಲಯ ಅಥವಾ ಮಸೀದಿ ಇಲ್ಲದ ಜಗತ್ತಿನ ಏಕೈಕ ದೇಶವಿದೆ ಎಂಬುದು ಸತ್ಯ. ಈ ದೇಶದಲ್ಲಿ ಒಂದು ದೇವಾಲಯ ಹಾಗೂ ಮಸೀದಿಯನ್ನು ಕಾಣಲು ಸಾಧ್ಯವೇ ಇಲ್ಲ. ಆದರೂ ಸಹ ಇಲ್ಲಿನ ಹಿಂದುಗಳು ಹಾಗೂ ಮುಸ್ಲಿಮರು ಸುಮ್ಮನೆ ಕುಳಿತಿರುವುದೇಕೆ. ತಿಳಿಯೋಣ ಬನ್ನಿ.

ಹೌದು ಈ ದೇಶ ತುಂಬಾ ವಿಶೇಷವಾದದ್ದು, ಈ ವಿಶೇಷತೆಯಿಂದಾಗಿ ಈ ದೇಶವು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಸ್ನೇಹಿತರೇ, ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ದೇಶ ಬೇರೆ ಯಾವುದೋ ಅಲ್ಲ ವ್ಯಾಟಿಕನ್ ಸಿಟಿ, ಇದು ವಿಶ್ವದ ಅತ್ಯಂತ ಚಿಕ್ಕ ದೇಶ ಎಂದು ಕರೆಯಲ್ಪಡುತ್ತದೆ. ವ್ಯಾಟಿಕನ್ ನಗರವು ಒಂದೇ ದೇವಾಲಯ ಮತ್ತು ಮಸೀದಿ ಇಲ್ಲದ ವಿಶ್ವದ ಏಕೈಕ ದೇಶವಾಗಿದ್ದು ಇಲ್ಲಿ ಯಾವುದೇ ದೇವಸ್ಥಾನ ಅಥವಾ ಮಸೀದಿ ಕಾಣಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ಎಲ್ಲರೂ ಕ್ರೈಸ್ತಮತವನ್ನು ಆರಾಧಿಸುವವರು ಆಗಿರುತ್ತಾರೆ. ನಾವು ಈ ನಗರದಲ್ಲಿ ವಿಶ್ವದ ಅತಿದೊಡ್ಡ ಚರ್ಚ್ ಅನ್ನು ಕಾಣಬಹುದು.

ಹೌದು ಅತಿ ಚಿಕ್ಕ ದೇಶವಾದ ವಾಟಿಕನ್ ನಗರದಲ್ಲಿ ಸುಮಾರು ಹದಿನೈದು ಚರ್ಚುಗಳಿವೆ. 44 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ವ್ಯಾಟಿಕನ್ ನಗರ ಇಟಾಲಿಯನ್ ನಗರವಾದ ರೋಮ್ನಲ್ಲಿ ಇದೆ. ಈ ದೇಶವು ಜಗತ್ತಿನ ಎಲ್ಲಾ ದೇಶಗಳಿಗಿಂತ ಚಿಕ್ಕದಾಗಿದೆ ಆದರೆ ಇಲ್ಲಿ ಕ್ರಿಶ್ಚಿಯನ್ನರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಈ ದೇಶದಲ್ಲಿ ಉಳಿದ ಧರ್ಮದವರಿಗೆ ಅಷ್ಟೊಂದು ಮಹತ್ವ ನೀಡಲ್ಲ ಹೀಗಾಗಿ ಈ ದೇಶದಲ್ಲಿ ಮಂದಿರಗಳು ಹಾಗೂ ಮಸಿದಿಗಳು ಕಂಡು ಬರಲು ಸಾಧ್ಯವಿಲ್ಲ. ಕೇವಲ ಚರ್ಚ್ಗಳು ಮಾತ್ರ ಕಾಣುತ್ತವೆ. ಈ ನಗರದ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.