Advertisements

ಸಿವಿಲ್ ಇಂಜಿನಿಯರ್ ಎಂದು ಮಗಳನ್ನು ಮದುವೆ ಮಾಡಿದರು.. ಆದರೆ ಈಗ ಈ ಹೆಣ್ಣು ಮಗಳ ಸ್ಥಿತಿ ಏನಾಗಿದೆ ನೋಡಿ‌‌‌.. ಈಕೆ ನಿಜಕ್ಕೂ ಯಾರು ಗೊತ್ತಾ.. ಮನಕಲಕುತ್ತದೆ..

Kannada News

ಹೆತ್ತವರು ದಯಮಾಡಿ ತಮ್ಮ ಮಗಳಿಗೆ ಮದುವೆಯಾಗಲು ಡಾಕ್ಟ್ರೇ ಬೇಕು.. ಇಂಜಿನಿಯರ್ರೇ ಬೇಕು ಎಂದು ಅಪೇಕ್ಷೆ ಪಡಬೇಡಿ.. ಎಲ್ಲಾ ವೃತ್ತಿಯವರಲ್ಲೂ ಒಳ್ಳೆಯವರೂ ಇದ್ದಾರೆ.. ಹಾಗೆ ಎಲ್ಲಾ ವೃತ್ತಿಯವರಲ್ಲೂ ಕೀಳು ಮನಸ್ಸಿನವರೂ ಸಹ ಇರುತ್ತಾರೆ.. ಅಳಿಯನಿಗೆ ಸಂಪಾದನೆ ಇರಬೇಕು ನಿಜ.. ಆದರೆ ಸಂಪಾದನೆಯನ್ನು ಮಾತ್ರ ನೋಡಿ ಮಗಳನ್ನು ನೀಡಬೇಡಿ.. ಹಣ ಮೂರು ದಿನ ಬಂದರೆ ಆತನ ಗುಣ ನಡವಳಿಕೆಯೇ ಕೊನೆವರೆಗೂ ಬರುವುದು.. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮನಸ್ಸಿದ್ದರೆ ಸಾಕು.. ಆತ ಜೀವನ ನಡೆಸಲು ಶಕ್ತನಾಗಿಯೇ ಇರುತ್ತಾನೆ.. ಇಲ್ಲವಾದರೆ ಈ ಹೆಣ್ಣು ಮಗಳಿಗೆ ಆದ ಸ್ಥಿತಿಯೇ ಇತರರಿಗೂ ಆಗುತ್ತದೆ..

ಹೌದು ಈಕೆಯ ಹೆಸರು ರಚಿತಾ.. ವಯಸ್ಸಿನ್ನೂ ಕೇವಲ ಇಪ್ಪತ್ತೊಂದು.. ಇನ್ನೂ ಅರ್ಧದಷ್ಟು ಜೀವನವನ್ನೂ ಸಹ ನೋಡಿರದ ಈಕೆಗೆ ಇಂದು ಬಂದಿರುವ ಸ್ಥಿತಿ ಯಾವ ಶತ್ರುವಿನ ಮಕ್ಕಳಿಗೂ ಬಾರದಿರಲಿ.. ಹೌದು ಎಲ್ಲಾ ಹೆಣ್ಣು ಮಕ್ಕಳಂತೆ ಮದುವೆಯ ಬಗ್ಗೆ ಮುಂದಿನ ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಹೆಣ್ಣು ಮಗಳು ರಚಿತಾ.. ಅದೇ ರೀತಿ ಮನೆಯಲ್ಲಿಯೂ ಸಿವಿಲ್ ಇಂಜಿನಿಯರ್ ಒಬ್ಬನನ್ನು ನೋಡಿ ರಚಿತಾಳನ್ನು ಮದುವೆ ಮಾಡಿದ್ದರು.. ಹದಿನೆಂಟು ವರ್ಷ ತುಂಬುತ್ತಿದ್ದಂತೆ ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಮುಗಿಸಿಕೊಂಡರೇನೋ ಸರಿ.. ಆದರೆ ಮದುವೆಯಾದ ದಿನದಿಂದಲೂ ಈ ಹೆಣ್ಣು ಮಗಳು ಪಟ್ಟ ಪಾಡು ಒಂದೆರೆಡಲ್ಲ..

ಹೌದು ಕಳೆದ ಎರಡೂ ವರೆ ವರ್ಷದ ಹಿಂದೆ ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿದ್ದ ವೀರಣ್ಣ ಎಂಬಾತನ ಜೊತೆ ರಚಿತಾಳ ಮದುವೆ ಅದ್ಧೂರಿಯಾಗಿ ನೆರವೇರುತ್ತದೆ.. ಮಗಳಿಗೆ ತಮ್ಮ ಕೈಲಾದಷ್ಟು ಚಿನ್ನ ಹಣ ಎಲ್ಲವನ್ನೂ ಕೊಟ್ಟು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿರುತ್ತಾರೆ.. ಕಲಬುರುಗಿಯ ಬ್ಯಾಂಕ್ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು.. ಸುಂದರ ಸಂಸಾರಗಳು ಒಮ್ಮೊಮ್ಮೆ ಅತಿಯಾದ ಆಸೆಗಳಿಗೆ ಬಲಿಯಾಗಿ ಹೋಗುತ್ತವೆ ಎಂಬುದಕ್ಕೆ ಈ ಕುಟುಂಬವೇ ಉದಾಹರಣೆ.. ಹೌದು ಇತ್ತ ರಚಿತಾ ಮದುವೆಯಾದ ದಿನದಿಂದಲೂ ಗಂಡನ ಮನೆಯವರು ರಚಿತಾಳಿಗೆ ತವರಿನಿಂದ ಹಣ ತರುವಂತೆ ಒತ್ತಾಯ ಮಾಡುತ್ತಲೇ ಇದ್ದರು..

ಈಗ ತಾನೆ ಮದುವೆ ಮಾಡಿದ್ದಾರೆ ನನ್ನ ಗಂಡ ಇಂತವನು ಎಂದು ತವರಿಗೆ ತಿಳಿದರೆ ಎಲ್ಲಿ ಅಪ್ಪ ಅಮ್ಮ ನೊಂದುಕೊಳ್ಳುವರೋ ಎಂದು ಎಲ್ಲವನ್ನು ಹೊಟ್ಟೆಯಲ್ಲಿಯೇ ಹಾಕಿಕೊಂಡು ಎಲ್ಲವನ್ನೂ ಸಹಿಸಿಕೊಂಡು ಸಂಸಾರ ನಡೆಸಿಕೊಂಡು ಬರುತ್ತಿದ್ದಳು‌‌.. ಒಂದು ವರ್ಷದ ಬಳಿಕ ರಚಿತಾ ವೀರಣ್ಣ ದಂಪತಿಗೆ ಗಂಡು ಮಗು ಸಹ ಆಯಿತು.. ಇನ್ನೇನು ಮಗು ಜನಿಸಿದೆ.. ಇನ್ನಾದರೂ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬಹುದು.. ಗಂಡನ ಪ್ರೀತಿ ದೊರೆಯಲಿದೆ ಎಂದುಕೊಂಡವಳಿಗೆ ಮಗು ಹುಟ್ಟಿದ ನಂತರವೂ ನೆಮ್ಮದಿ ಸಿಗದಂತಾಯ್ತು..

ಮೊನ್ನೆ ಮಂಗಳವಾರ ರಾತ್ರಿ ಗಂಡನ ಮನೆಯವರು ನೋಡುತ್ತಿದ್ದ ನೋವು ತಾಳಲಾರದೆ ರಚಿತಾ ಕಲಬುರುಗಿಯ ತನ್ನ ಗಂಡನ ಮನೆಯಲ್ಲಿಯೇ ಜೀವ ಕಳೆದುಕೊಂಡು ಬಿಟ್ಟಿದ್ದಾಳೆ. ಹೌದು ಇದೀಗ ಆ ಪುಟ್ಟ ಕಂದಮ್ಮ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದೆ.. ರಚಿತಾ ಜೀವ ಕಳೆದುಕೊಳ್ಳುವ ಹಿಂದಿನ ದಿನವೂ ಸಹ ವೀರಣ್ಣ ಹಣ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನಂತೆ.. ಇದರಿಂದ ಮನನೊಂದ ರಚಿತಾ ಮಂಗಳವಾರ ರಾತ್ರಿ ಮನೆಯಲ್ಲಿಯೇ ಈ ನಿರ್ಧಾರ ಮಾಡಿ ಕೊನೆಯುಸಿರೆಳೆದಿದ್ದಾಳೆ.. ಇತ್ತ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಂಅ ದಾಖಲಾಗಿದ್ದು ರಚಿತಾಳ ಗಂಡ ವೀರಣ್ಣ.. ಮಾವ ಚಂದ್ರಕಾಂತ್.. ಅತ್ತೆ ಲಕ್ಷ್ಮೀಬಾಯಿ.. ಮೈದುನ ಪವನ್ ಎಲ್ಲರನ್ನೂ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ..

ಅಲ್ರಯ್ಯಾ ಈಗ ನಿಮಗೆ ಏನು ಸಿಕ್ತು.. ಅತ್ತ ನಿಮ್ಮನ್ನೇ ನಂಬಿಕೊಂಡು ನಿಮ್ಮ ಮನೆಯ ದೀಪ ಬೆಳಗೋಕೆ ಬಂದಿದ್ದ ಆ ಮುಗ್ಧ ಜೀವವೂ ಹೋಯ್ತು.. ಇತ್ತ ನೀವುಗಳು ಕುಟುಂಬ ಸಮೇತರಾಗಿ ಪೊಲೀಸ್ ಠಾಣೆಯ ಪಾಲಾಗಿದ್ದೀರಿ.. ಆತ್ತ ಆ ಪುಟ್ಟ ಕಂದಮ್ಮ ಅದ್ಯಾವ ಜನ್ಮದಲ್ಲಿ ಅದೇನು ಪಾಪ ಮಾಡಿತ್ತೋ ಆ ಮಗು ಈಗ ಅಮ್ಮನೂ ಇಲ್ಲದೇ ಅಪ್ಪನೂ ಇಲ್ಲದೇ ತಬ್ಬಲೊಯಾಗಿ ಹೋಯ್ತು.. ಬದುಕೋ ಮೂರು ದಿನ ಬಾಳಿಗೆ ಕಂಡವರ ಹಣಕ್ಕೆ ಆಸೆ ಪಡೋ ಇಂತಾ ಬಾಳು ಯಾಕ್ರಯ್ಯಾ.‌. ಈ ರೀತಿ ಈಗಲೂ ನೂರಾರು ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಕಷ್ಟ ಪಡುತ್ತಿರೋದು ಸತ್ಯದ ಮಾತು.. ಇನ್ನಾದರೂ ಬದಲಾಗ್ರಯ್ಯಾ.. ಇರೋವಷ್ಟು ದಿನ ನೆಮ್ಮದಿಯಾಗಿ ಬದುಕೋ ದಾರಿ ನೋಡಿ.. ಕೊರೊನಾ ಬಂದು ಸಾವಿರಾರು ಜನ ಜೀವ ಕಳೆದುಕೊಂಡು ಕುಟುಂಬಗಳು ಕಣ್ಣೀರಿನಲ್ಲಿವೆ.. ಇನ್ನು ನೀವುಗಳು ಮಾಡೋ ಇಂತಹ ತಪ್ಪುಗಳಿಂದ ಮತ್ತಷ್ಟು ಜೀವಗಳು ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಳ್ಳುವಂತೆ ಮಾಡಬೇಡಿ..