Advertisements

ಅದೊಂದು ಫೋನ್ ಬಂದ ಕೂಡಲೇ.. ಮದುವೆ ಮನೆಯಲ್ಲಿಯೇ ಪೊಲೀಸ್ ಅಧಿಕಾರಿ ಏನಾದರು ಗೊತ್ತಾ.. ಬೆಚ್ವಿಬಿದ್ದ ಪತ್ನಿ.. ಇಷ್ಟೇ ಜೀವನ..

Kannada News

ಇತ್ತೀಚಿನ ದಿನಗಳಲ್ಲಿ‌ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಿಜಕ್ಕೂ ಜೀವದ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿದೆ.. ಯಾವಾಗ ಇರ್ತೀವೋ ಯಾವಾಗ ಹೋಗ್ತೀವೋ.. ಇದ್ದಷ್ಟು ದಿನಗಳ ಕಾಲ ನಮ್ಮವರ ಜೊತೆ ನಮಗಾಗಿ ಇರುವವರ ಜೊತೆ ಸಂತೋಷವಾಗಿ ಜೀವನ ಮಾಡಬೇಕು.. ಇರುವಷ್ಟು ದಿನ ಮಾನವೀಯತೆಯಿಂದ ಮತ್ತೊಬ್ಬರಿಗೆ ನೆರವಾಗುತ್ತಾ.. ಪ್ರೀತಿ ಪಾತ್ರರಿಗೆ ಪ್ರೀತಿ ಹಂಚುತ್ತಾ ಬದುಕಬೇಕೆನಿಸುವಂತಾಗಿದೆ..

Advertisements
Advertisements

ಹಿಂದೆ ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಇಲ್ಲವಾದ ಘಟನೆ ಅದೆಷ್ಟೋ ಜನರ ಜೀವನದಲ್ಲಿ ಜೀವನದ ದಿಕ್ಕನ್ನೇ ಬದಲಿಸುತ್ತಿದೆ.. ಯಾವ ಸಮಯದಲ್ಲಿ ಯಾವಾಗ ಇಲ್ಲವಾಗ್ತೀವೋ ಇದ್ದಷ್ಟು ದಿನ ಸಂತೋಷವಾಗಿ ಬಾಳಬೇಕೆಂಬ ನಿರ್ಧಾರ ಮಾಡುತ್ತಿದ್ದಾರೆ.‌. ಈ ನಡುವೆಯೇ ಮತ್ತೊಂದು ಮನಕಲಕುವ ಘಟನೆ ನಡೆದಿದ್ದು ನಿಜಕ್ಕೂ ಮದುವೆ ಮನೆ ಅಕ್ಷರಶಃ ಸೂತಕದ ಮನೆಯಾಗಿ ಹೋಗಿದೆ..

ಹೌದು ಈ ಪೊಲೀಸ್ ಅಧಿಕಾರಿಯ ಹೆಸರು ವೆಂಕಟ ಸ್ವಾಮಿ.. ಇವರಿಗೆ ತಾಯಿ ಎಂದರೆ ಜೀವ ಎನ್ನುತ್ತಿದ್ದರು.. ಇವರು ಆಂದ್ರ ಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯ ಸಮುದ್ರ ವಲಯದ ಕೊರ್ರಪಾಡು ಗ್ರಾಮದ ನಿವಾಸಿ.. ಇವರು ಪಾಮಿರಾ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.. ಇವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದನು.. ಇವರಿಗೆ ತಾಯಿ ಎಂದರೆ ಬಹಳ ಪ್ರೀತಿ.. ಇವರ ತಾಯಿಯ ಹೆಸರು ಕೊನ್ನಮ್ಮ.. ಎಪ್ಪತ್ತು ವರ್ಷ ವಯಸ್ಸಾಗಿತ್ತು.. ನೆಮ್ಮದಿಯ ಸಂಸಾರ ಇವರದ್ದಾಗಿತ್ತು.. ಆದರೆ ಕಳೆದ ಕೆಲ ದಿನಗಳಿಂದ ತಾಯಿಯ ಆರೋಗ್ಯ ಹದಗೆಟ್ಟಿತ್ತು.. ತಾಯಿಯನ್ನು ಅನಂತಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು.. ಅತ್ತ ತಾಯಿ ಮೊಮ್ಮಗನ ಮದುವೆ ನೋಡಲು ಆಸೆ ಪಟ್ಟರು.. ತಾಯಿಯ ಮಾತಿಗೆ ಇಲ್ಲವೆನ್ನದ ಮಗ ಇದ್ದಕಿದ್ದ ಹಾಗೆ ಮಗನ ಮದುವೆ ಮಾಡಲು ನಿರ್ಧರಿಸಿ ಎರಡೇ ದಿನದಲ್ಲಿ ಮಗನ ಮದುವೆಯನ್ನೂ ಸಹ ನೆರವೇರಿಸಿದರು..ಆಗಲಾದರೂ ತನ್ನ ತಾಯಿ ಗುಣಮುಖರಾಗಿ ಮನೆಗೆ ಮರಳಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡರು..

ಆದರೆ ವಿಧಿಯಾಟ ಬೇರೆಯೇ ಇತ್ತು.. ಹೌದು ಮದುವೆ ಮುಗಿದ ಕೆಲವೇ ಗಂಟೆಗಳಲ್ಲಿ ಮದುವೆ ಮನೆಯಲ್ಲಿಯೇ ಇದ್ದ ವೆಂಕಟಸ್ವಾಮಿ ಅವರಿಗೆ ಆಸ್ಪತ್ರೆಯಿಂದ ಫೋನ್ ಒಂದು ಬಂದಿತು.. ಹೌದು ಆ ತಾಯಿಯ ಜೀವ ಮೊಮ್ಮಗನ ಮದುವೆ ಸುದ್ದಿ ಕೇಳಿ ಸಂತೋಷದಿಂದ ಅದಾಗಲೇ ಕಣ್ಣು ಮುಚ್ವಿಬಿಟ್ಟಿದ್ದರು.. ತಾಯಿ ಇಲ್ಲವಾದ ವಿಚಾರವನ್ನು ಫೋನ್ ನಲ್ಲಿ ಕೇಳಿದ ವೆಂಕಟಸ್ವಾಮಿ ಸ್ಥಳದಲ್ಲಿಯೇ ಕುಸಿದು ಬಿದ್ದರು.. ಮತ್ತೆ ಮೇಲೇಳಲೇ ಇಲ್ಲ.. ಹೌದು ಜೀವವೆನ್ನುತ್ತಿದ್ದ ತಾಯಿಯ ಜೊತೆಯೇ ಮಗನೂ ಬಾರದ ಲೋಕಕ್ಕೆ ಹೊಂಟು ಬಿಟ್ಟರು..

ಹೌದು ಸಂಭ್ರಮದಲ್ಲಿರಬೇಕಾದ ಮದುವೆ ಮನೆ ಸೂತಕದ ಮನೆಯಾಗಿ ಹೋಯ್ತು.. ಒಂದು ಕಡೆ ಮದುವೆಯಾದರೆ ಮತ್ತೊಂದು ಕಡೆ ಕುಟುಂಬದ ಎರಡು ಜೀವಗಳು ಇಲ್ಲವಾಗಿ ಹೋದವು.. ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.. ಇಷ್ಟೇ ಜೀವನ ಯಾವಾಗ ಇರ್ತೀವೋ ಯಾವಾಗ ಹೋಗ್ತೀವೋ.. ಆ ಭಗವಂತನ ನಿರ್ಣಯದ ಮುಂದೆ ನಾವೆಲ್ಲಾ ಸಣ್ಣವರು.. ನಮ್ಮ ಸಮಯ ಬಂದಾಗ ನಾವು ಸಾಗುತಲಿರಬೇಕಷ್ಟೇ.. ಇದ್ದಷ್ಟು ದಿನ ನಮ್ಮವರಿಗಾಗಿ ಪ್ರೀತಿಯಿಂದ ಬದುಕೋಣ..