Advertisements

ಈ ಯುವತಿ ಮದುವೆ ಆಗಿರುವ ಯುವಕ ನಿಜಕ್ಕೂ ಯಾರು ಗೊತ್ತೇ! ನೋಡಿ..

Kannada News

ನಿಜವಾದ ಪ್ರೀತಿಯು ಜಾತಿ, ಧರ್ಮ, ಬಣ್ಣ, ಭಾಷೆ ಹಾಗೂ ಗಡಿ ಎಲ್ಲವನ್ನು ಮೀರಿದ್ದು ಎಂಬುದಕ್ಕೂ ಹಾಗೂ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿಗೂ ಆಂಧ್ರ ಪ್ರದೇಶದಲ್ಲಿ ನಡೆದ ಈ ಒಂದು ಮದುವೆ ತಾಜಾ ನಿದರ್ಶನವಾಗಿದೆ.
ಆಂಧ್ರ ಯುವತಿ, ಅಮೆರಿಕ ಯುವಕ ಎತ್ತಣದಿಂದೆತ್ತಣ ಸಂಬಂಧವಯ್ಯ ಎಂದೆನಿಸಬಹುದು. ಆದರೆ, ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ಮದುವೆ ಎಂಬ ಬಂಧನದಲ್ಲಿ ಇರಿಸಿದೆ. ಹೌದು, ಆಂಧ್ರದ ಟಿ. ಹರ್ಷವಿ ಹಾಗೂ ಅಮೆರಿಕದ ದಮಿಯನ್ ಫ್ರಾಂಕ್ ಹಿಂದು ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

Advertisements
Advertisements

ವಧು ಹರ್ಷವಿ, ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ಬಿ.ಟೆಕ್ ಪೂರ್ಣಗೊಳಿಸಿರುವ ಹರ್ಷವಿ, ಅಮೆರಿಕದ ಬೋಸ್ಟನ್‌ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ದಾಮಿಯನ್ ಫ್ರಾಂಕ್ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ, ಬಳಿಕ ಹಿರಿಯನ್ನು ಒಪ್ಪಿಸಿ, ಇದೀಗ ಇಬ್ಬರು ಸಪ್ತಪದಿ ತುಳಿಯುವ ಮೂಲಕ ತಮ್ಮ ಸಂಬಂಧಕ್ಕೆ ಒಂದು ಹೊಸ ಅರ್ಥವನ್ನು ನೀಡಿದ್ದಾರೆ.


ಈಗಾಗಲೇ ಅಮೆರಿದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಆದರೆ, ಹರ್ಷವಿ ಕುಟುಂಬದ ಒತ್ತಾಯದ ಮೇರೆಗೆ ತಿರುಪತಿಯಲ್ಲಿ ಮತ್ತೊಮ್ಮೆ ವಿವಾಹ ಕಾರ್ಯ ನೆರವೇರಿದೆ. ತಿರುಪತಿಯ ಹೋಟೆಲ್ ಒಂದರಲ್ಲಿ ಕಳೆದ ಗುರುವಾರ ರಾತ್ರಿ ಅದ್ಧೂರಿ ಮದುವೆ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಾಕಷ್ಟು ಹಿತೈಷಿಗಳ ನಡುವೆ ಹರ್ಷವಿ ಮತ್ತು ಫ್ಯಾಂಕ್ ಮತ್ತೊಮ್ಮೆ ಮದುವೆ ಆಗಿದ್ದಾರೆ.