Advertisements

ಪಕ್ಕದ ಮನೆಯವ ಈಕೆಯ ಜೊತೆ ಮಾಡಿದ ಕೆಲಸಕ್ಕೆ ಈ ಹೆಣ್ಣು ಮಗಳು ಮಾಡಿರುವ ಕೆಲಸ ನೋಡಿ‌.. ದಯವಿಟ್ಟು ಯಾರೇ ಹೆಣ್ಣು ಮಕ್ಕಳು ಇಂತಹ ಕೆಲಸ ಮಾತ್ರ ಮಾಡಬೇಡ್ರಮ್ಮಾ..

Kannada News

ಆಧುನಿಕತೆ ಹೆಚ್ಚಾದಂತೆ ಮಕ್ಕಳ ಮನಸ್ಸು ಸೂಕ್ಷ್ಮವಾಗುತ್ತಿದೆ ನಿಜ.. ಆದರೆ ಕೆಲವೊಮ್ಮೆ ಜೀವನದಲ್ಲಿ ಎದುರಾಗುವ ಸಣ್ಣ ಸಣ್ಣ ಸವಾಲುಗಳನ್ನು ಎದುರೊಸಲಾಗದೇ ಅದೇ ಮಕ್ಕಳು ಮಾಡುವ ಕೆಲಸ ನಿಜಕ್ಕೂ ಯಾವ ರೀತಿ ಸಾಗುತ್ತಿದೆ ನಮ್ಮ ಜೀವನ ಶೈಲಿ.. ನಿಜಕ್ಕೂ ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುತ್ತಿದ್ದೇವಾ ಅಥವಾ ನಾವೇ ನಮ್ಮ ಮಕ್ಕಳನ್ನು ಇಂತಹ ಕೆಕಸ ಮಾಡಿ ಜೀವನ ಹಾಳು ಮಾಡಿಕೊಳ್ಳಲು ಬಿಡುತ್ತಿದ್ದೇವಾ ನಿಜಕ್ಕೂ ತಿಳಿಯದು.. ಹೌದು ಇಲ್ಲೊಬ್ಬ ಹೆಣ್ಣು ಮಗಳು ಪಕ್ಕದಮನೆಯ ಹುಡುಗ ಈಕೆಯ ಹಿಂದೆ ಬಿದ್ದ ಎಂಬ ಕಾರಣಕ್ಕೆ ಈಕೆ ಮಾಡಿಕೊಂಡಿರುವ ಕೆಲಸ ನಿಜಕ್ಕೂ ಮನಕಲಕುವಂತಿದೆ.. ಆದರೆ ಮಕ್ಕಳು ಇಷ್ಟು ಸೂಕ್ಷ್ಮವಾಗೋದು ಎಷ್ಟು ಸರಿ ಎನಿಸುವಂತೆಯೂ ಇದೆ..

ಹೌದು ಈ ಹೆಣ್ಣು‌ ಮಗಳ ಹೆಸರು ವಿದ್ಯಾಶ್ರೀ.. ವಯಸ್ಸಿನ್ನೂ ಕೇವಲ ಇಪ್ಪತ್ತೊಂದು.. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದ ನಿವಾಸಿ ಕುಂಟಿಗೆಯ ಪಟೇಲ್ ಈಶ್ವರಪ್ಪ ಗೌಡ ಅವರ ಮಗಳು‌.. ವಿದ್ಯಾಶ್ರೀ ಹೊಸನಗರದ ಕೊಡಚಾದ್ರಿ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಳು.. ಮಗಳನ್ನು ಬಹಳ ಪ್ರೀತಿಯಿಂದ ಸಾಕಿದ್ದರು ಹೆತ್ತವರು.. ಇತ್ತ ವಿದ್ಯಾಶ್ರೀ ಕೂಡ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಕನಸು ಕಂಡಿದ್ದಳು.. ಆದರೆ ಅದ್ಯಾಕೋ ಬೇಡದ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡು ಆ ಕನಸನ್ನು ನನಸು ಮಾಡಿಕೊಳ್ಳದೇ ಅರ್ಧಕ್ಕೇ ಬಿಟ್ಟು ಹೊರಟು ಹೋದಳು..

ಹೌದು ವಿದ್ಯಾಶ್ರೀ ಎಂದಿನಂತೆ ಪ್ರತಿದಿನವೂ ಕಾಲೇಜಿಗೆ ಹೋಗುತ್ತಿದ್ದಳು.. ಆ ಸಮಯದಲ್ಲಿ ತನ್ನ ಮನೆಯ ಪಕ್ಕದ ಮನೆ ನಿವಾಸಿ ಶಶಾಂಕ್ ಎಂಬಾತ ಪ್ರತಿದಿನ ವಿದ್ಯಾಶ್ರೀ ಕಾಲೇಜಿಗೆ ಹೋಗುವ ಸಮಯದಲ್ಲಿ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದ.. ಪದೇ ಪದೇ ಹಿಂದೆ ಬರಬೇಡ ಎಂದರೂ ಸಹ ಇದೇ ಕೆಲಸ ಮಾಡುತ್ತಿದ್ದ.. ಇದರಿಂದ ಬೇಸತ್ತ ವಿದ್ಯಾಶ್ರೀ ಏಪ್ರಿಲ್ ಹತ್ತೊಂಭತ್ತರಂದು ಕ್ರಿಮಿನಾಶಕವನ್ನು ಸೇವಿಸಿಬಿಟ್ಟಳು.. ತಕ್ಷಣ ಮನೆಯವರಿಗೆ ವಿಚಾರ ತಿಳಿದು ವಿದ್ಯಾಶ್ರೀಯನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲು‌ ಮಾಡಲಾಗಿತ್ತು.. ಕಳೆದ ಇಪ್ಪತ್ತು ದಿನಗಳಿಂದ ಆಕೆಗೆ ಚಿಕಿತ್ಸೆ ನೀಡಲಾಗುತಿತ್ತು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ವಿದ್ಯಾಶ್ರೀ ಕೊನೆಯುಸಿರೆಳೆದಿದ್ದಾಳೆ..

ಹೌದು ಸಣ್ಣ ವಿಚಾರವೊಂದನ್ನು ಗಟ್ಟಿಯಾಗಿ ಎದುರಿಸಿ ನಿಲ್ಲುವ ಧೈರ್ಯ ಮಾಡದೇ ವಿದ್ಯಾಶ್ರೀ ತನ್ನ ಹೆತ್ತವರು ಸಹೋದರನ ಬಗ್ಗೆ ಆಲೋಚಿಸದೆ ದುಡುಕಿನ ನಿರ್ಧಾರ ಮಾಡಿಬಿಟ್ಟಳು.. ಸೂಕ್ಷ್ಮ ಮನಸ್ಸಿನ ವಿದ್ಯಾಶ್ರೀ ಈ ವಿಚಾರವನ್ನು ಎದುರಿಸಲಾಗದೇ ತನ್ನ ಜೀವನವನ್ನೇ ಮುಕ್ತಾಯ ಮಾಡಿಕೊಂಡು ಬಿಟ್ಟಳು.. ಇತ್ತ ಮಗಳನ್ನು ಕಳೆದುಕೊಂಡ ಆ ತಂದೆ ತಾಯಿ.. ಹಾಗೂ ತಂಗಿಯನ್ನು ಕಳೆದುಕೊಂಡ ವಿದ್ಯಾಶ್ರೀ ಸಹೋದರ ರಕ್ಷಿತ್ ನ ಆಕ್ರಂದನ ಮುಗಿಲು ಮುಟ್ಟಿತ್ತು.. ನನ್ನ ತಂಗಿಯ ಈ ಘಟನೆಗೆ ಶಶಾಂಕ್ ಕಾರಣ ಎಂದು ರಕ್ಷಿತ್ ಪೊಲೀಸರಿಗೆ ದೂರು ನೀಡಿದ್ದು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.. ಆ ಶಶಾಂಕ್ ಗೆ ಇನ್ನೆಂದೂ ಯಾವ ಹೆಣ್ಣು ಮಕ್ಕಳ ಹಿಂದೆಯೂ ಬೀಳದಂತೆ ಹಾಗೂ ಅವನಿಗೆ ಕೊಡುವ ಶಿಕ್ಷೆಯಿಂದ ಮತ್ಯಾರೂ ಹೆಣ್ಣು ಮಕ್ಕಳ‌ ಹಿಂದೆ ಬೀಳದಂತೆ ಪಾಠವಾಗಬೇಕು.. ಆದರೆ ಇಲ್ಲಿ‌ ಆಲೋಚನೆ ಮಾಡಬೇಲಾದ ವಿಚಾರ ಬೇರೆಯೇ ಇದೆ..

ಹೌದು ವಿದ್ಯಾಶ್ರೀ ಅವರ ತಂದೆ ತಾಯಿ ಅಣ್ಣನ ಸಂಕಟ ನಿಜಕ್ಕೂ ಯಾರದಲೂ ಕಡಿಮೆ‌ ಮಾಡಲು ಸಾಧ್ಯವಿಲ್ಲ.. ಅವರು ಇರುವವರೆಗೂ ಈ ನೋವು ಇದ್ದದ್ದೇ ನಿಜ.. ಆದರೆ ಈ ಘಟನೆಯಿಂದ ಹೆಣ್ಣು ಮಕ್ಕಳು ಹಾಗೂ ಪೋಷಕರು ಸಾಕಷ್ಟು ಪಾಠ ಕಲಿಯುವುದಿದೆ.. ಹೌದು ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ಪೋಷಕರು ಮಕ್ಕಳಿಗೆ ಮೊದಲು ಹೊರಗಿನ ಸಮಾಜದಲ್ಲಿನ ಇಂತಹ ಸಣ್ಣ ಪುಟ್ಟ ವಿಚಾರಗಳನ್ನು ಸಮರ್ಥವಾಗಿ ಎದುರಿಸುವಂತಹ ಧೈರ್ಯ ನೀಡಬೇಕು.. ಕನಿಷ್ಟ ಇಂತಹ ಘಟನೆಗಳು ನಡೆದಾಗ ಮಕ್ಕಳು‌ ಮುಕ್ತವಾಗಿ ಹೆತ್ತವರ ಬಳಿ ಹೇಳಿಕೊಳ್ಳುವಂತಹ ವಾತಾವರಣ‌ ಪ್ರತಿ ಮನೆಯಲ್ಲಿಯೂ ನಿರ್ಮಾಣವಾಗಬೇಕು..

ಅದೆಲ್ಲದಕಿಂತ ಮುಖ್ಯವಾಗಿ ಶಾಲಾ ಕಾಲೇಜುಗಳಲ್ಲಿ ಈಗಿನ ಶಿಕ್ಷಣ ವ್ಯವಸ್ಥೆ.. ಕೇವಲ ಓದು ಅಂಕಗಳ ಹಿಂದೆ ಬಿದ್ದು ಮೌಲ್ಯಯುತ ಶಿಕ್ಷಣವೇ ಮಾಯವಾಗಿರುವ ಶಿಕ್ಷಣ ವ್ಯವಸ್ಥೆ ಮೊದಲು ಬದಲಾಗಬೇಕು.. ಕೇವಲ ಹದಿನೈದು ಇಪ್ಪತ್ತು ವರ್ಷದ ಹಿಂದಷ್ಟೇ ಶಾಲೆಗಳಲ್ಲಿ ಮೇಷ್ಟುಗಳು ಮಕ್ಕಳಿಗೆ ಪೆಟ್ಟು ಕೊಟ್ಟು ಬಾರಿಸಿದ್ದರೂ ಸಹ ನಾವುಗಳೆಂದೂ ಅದರಿಂದ ಕುಗ್ಗುತ್ತಿರಲಿಲ್ಲ.. ಬದಲಿಗೆ ಬುದ್ಧಿ ಕಲಿಯುತ್ತಿದ್ದೆವು.. ಆದರೆ ಈಗಿನ ಮಕ್ಕಳು ಶಿಕ್ಷಕರು ಬೈದರೂ ಸಹ ಜೀವ ಕಳೆದುಕೊಳ್ಳುವಂತಹ ನಿರ್ಧಾರ ಮಾಡಿದ ಉದಾಹರಣೆಗಳೂ ಇವೆ.. ಇದಕ್ಕೆಲ್ಲಾ ಕಾರಣ ಕೇವಲ ಅಂಕಗಳ ಹಿಂದೆ ಓಡುತ್ತಿರುವ ಶಿಕ್ಷಣ ವ್ಯವಸ್ಥೆ.. ಅಂಕಗಳು ಮುಖ್ಯ ನಿಜ.. ಆದರೆ ಮಕ್ಕಳೇ ಇಲ್ಲವಾದರೆ ಅಂಕಗಳಿಟ್ಟುಕೊಂಡು ಪೂಜೆ ಮಾಡಬೇಕಷ್ಟೇ.. ಶಾಲೆಗಳಲ್ಲಿ ಕಾಲೇಜುಗಳಲ್ಲಿ‌‌ ಮೊದಲು ಮಕ್ಕಳು‌ ಜೀವನವನ್ನು ಸಮರ್ಥವಾಗಿ ಎದುರಿಸುವ ಮೌಲ್ಯ ಶಿಕ್ಷಣ‌ ನೀಡುವಂತಾಗಲಿ..

ಮಕ್ಕಳ ಮನಸ್ಸುಗಳು ಗಟ್ಟಿಯಾಗಲಿ.. ಶಿಕ್ಷಣ ವ್ಯವಸ್ಥೆ ಬದಲಾಗಲಿ.. ಆದರೆ ಇದು ಬಹುಶಃ ಸಧ್ಯ ಕನಸಿನ‌ ಮಾತು.. ನಮ್ಮ ನಮ್ಮ‌ ಮಕ್ಕಳನ್ನು ನಾವೇ ಉಳಿಸಿಕೊಳ್ಳಬೇಕಿದೆ.. ಪೋಷಕರು ಮನೆಗಳಲ್ಲಿ‌ ಮಕ್ಕಳ ಜೊತೆ ನಡೆದುಕೊಳ್ಳುವ ರೀತಿಯಿಂದ ಬಹುಶಃ ಇಂತಹ ಘಟನೆಗಳನ್ನು ಕಡಿಮೆ ಮಾಡಬಹುದು.. ಈ ರೀತಿ ಮನೆಯ ಹೆಣ್ಣು ಮಕ್ಕಳ ಹಿಂದೆ ಯಾರಾದರೂ ಬಿದ್ದಾಗ ಅದು ಅವಮಾನ ಎಂದು ಮಕ್ಕಳನ್ನು ಎಂದೂ ಸಹ ಬೈಯಬೇಡಿ.. ಬದಲಿಗೆ ಅಂತಹ ಸಂದರ್ಭಗಳನ್ನು ಎದುರಿಸುವಂತೆ ಮಾಡಿ.. ಇಂತಹ ವಿಚಾರಗಳನ್ನು ಹೆತ್ತವರ ಬಳಿ ಮುಕ್ತವಾಗಿ ಮಾತನಾಡುವಷ್ಟು ಸ್ನೇಹದಿಂದಿರಿ.. ವಿದ್ಯಾಶ್ರೀಗೆ ಆದ ಗತಿ ಮತ್ಯಾವ ಹೆಣ್ಣು ಮಕ್ಕಳಿಗೂ ಆಗದಿರಲಿ.. ಇದೆಲ್ಲದಕಿಂತ ಅತಿ ಮುಖ್ಯವಾಗಿ ಮನೆಯಲ್ಲಿನ ಗಂಡು ಮಕ್ಕಳಿಗೆ ಮೊದಲು ನೆಟ್ಟಗೆ ಬುದ್ಧಿ ಕಲಿಸಿ..