Advertisements

ಮದುವೆಯಾಗಿ ಎರಡೇ ವರ್ಷಕ್ಕೆ ಈ ಜೋಡಿ ಇಂದು ಎಂತಹ ಸ್ಥಿತಿಯಲ್ಲಿದ್ದಾರೆ ಗೊತ್ತಾ.. ಮನಕಲಕುವ ಘಟನೆ..

Kannada News

ಮದುವೆ ಅನ್ನೋದು ನೂರಾರು ಬಂಧಗಳನ್ನು ಬೆಸೆಯೋ ಒಂದು ಪ್ರಕ್ರಿಯೆ.. ಗಂಡ ಅಥವಾ ಹೆಂಡತಿ ಯಾರೇ ಆಗಲಿ ಮುಂದಿನ ಸಂಪೂರ್ಣ ಜೀವನ ಮತ್ತೊಬ್ಬರಿಗಾಗಿ ಮುಡಿಪಾಗಿಟ್ಟು ಪ್ರೀತಿ ನೀಡುವುದೇ ನಿಜವಾದ ಜೀವನ.. ಅದರಲ್ಲಿಯೂ ಹೆಂಡತಿಯ ಪಾಲು ಒಂದು ಕೈ ಹೆಚ್ಚೇ ಇರುತ್ತದೆ.. ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಮತ್ತೊಂದು ಮನೆಯ ದೀಪವಾಗುವಳು‌.. ಆ ಕುಟುಂಬವನ್ನು ತನ್ನ ಕುಟುಂಬವೆಂದುಕೊಂಡು ಬೆಳೆಸುವಳು.. ಕೊನೆಗೆ ಆ ಕುಟುಂಬಕ್ಕಾಗಿಯೇ ತನ್ನನ್ನೇ ತಾನು ಮುಡಿಪಾಗಿಟ್ಟುಕೊಳ್ಳುವಳು.. ತನ್ನ ಆ ಕುಟುಂಬಕ್ಕೆ ಏನೇ ಕಷ್ಟ ಬಂದರೂ ಆಕೆ ಬಗೆ ಹರಿಸುವಳು‌‌.. ಆದರೆ ಇದೆಲ್ಲದಕ್ಕೂ ಪ್ರತಿಯಾಗಿ ಆಕೆ ಅಪೇಕ್ಷೆ ಪಡುವುದು ಮಾತ್ರ ಕುಟುಂಬ ಹಾಗೂ ಗಂಡನ ಪ್ರೀತಿ ಮಾತ್ರ.. ಗಂಡನ ಕಾಳಜಿ ಮಾತ್ರ.. ಆದರೇ ಅದೇ ಸಿಗದೇ ಹೋದರೇ ಆ ಹೆಣ್ಣಿನ ಬಾಳು ನಿಜಕ್ಕೂ ಊಹಿಸಲೂ ಕೂಡ ಸಾಧ್ಯವಾಗದು..

Advertisements
Advertisements

ಹೌದು ಮೈಸೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದ್ದು ಎರಡು ವರ್ಷದ ಹಿಂದಷ್ಟೇ ಮದುವೆಯಾದ ಈ ಜೋಡಿ ಇಂದು ಬಂದ ಸ್ಥಿತಿ ನಿಜಕ್ಕೂ ಯಾವ ಹೆಣ್ಣಿಗೂ ಬೇಡ.. ಹೌದು ಈ ಇಬ್ಬರೂ ಮೈಸೂರಿನ ನಿವಾಸಿಗಳು.. ಮದುವೆಯಾಗಿ ಎರಡೇ ವರ್ಷ.. ಹನ್ನೊಂದು ತಿಂಗಳ ಪುಟ್ಟ ಕಂದಮ್ಮನೂ ಇದೆ.. ಆದರೆ ಮಗು ಮುಖವನ್ನೂ ನೋಡದೇ ಈ ಪತಿರಾಯ ಮಾಡಿರೋ ಕೆಲಸ ಮನಕಲಕುವಂತಿದೆ.. ಹೌದು ಈತನ ಹೆಸರು ವಿಜಯ್ ವಯಸ್ಸು ಮೂವತ್ತು.. ಈ ಹೆಣ್ಣು ಮಗಳ ಹೆಸರು ನಂದಿನಿ ವಯಸ್ಸು ಇಪ್ಪತ್ತೈದು.. ಇಬ್ಬರದ್ದೂ ಬಹಳ ಚಿಕ್ಕವಯಸ್ಸು ಜೀವನವನ್ನು ಸರಿಯಾಗಿ ಕಟ್ಟಿಕೊಂಡಿದ್ದರೆ ಮುಂದಿನ ಬದುಕು ಸುಂದರವಾಗಿ ಸಾಗಿರುತಿತ್ತು.. ಆದರೆ ನಡೆದದ್ದೇ ಬೇರೆ.. ಹೌದು ನಂದಿನಿ ಹಾಗೂ ವಿಜಯ್ ದು ಪ್ರೇಮ ವಿವಾಹವೇನೂ ಅಲ್ಲ.. ಮನೆಯವರೇ ನೋಡಿ ನಿಶ್ಚಯ ಮಾಡಿದ್ದ ಮದುವೆ.. ಕಳೆದ ಎರಡು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮೈಸೂರಿನ ಜೆಪಿ ನಗರದಲ್ಲಿ ವಾಸ ಮಾಡುತಿತ್ತು..

ಶುರುವಿನಲ್ಲಿ ಎಲ್ಲವೂ ಚೆನ್ನಾಗಿತ್ತು.. ಆದರೆ ಬರುಬರುತ್ತಾ ವಿಜಯ್ ನ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತು.. ಅತ್ತ ನಂದಿನಿ ಗರ್ಭಿಣಿಯೂ ಆದಳು.. ಪುಟ್ಟ ಕಂದಮ್ಮನಿಗೆ ಜನ್ಮ ನೀಡಿದಳು.. ಅತ್ತ ನಂದಿನಿಯ ಹೆತ್ತವರು ಮಗಳ ಹೆರಿಗೆ ಮಾಡಿಸಿ ಬಾಣಂತನ ಮಾಡಿ ಮಗುವಿನ ಹಾರೈಕೆ ಮಾಡಿ ಕಳೆದ ಎರಡು ತಿಂಗಳ ಹಿಂದಷ್ಟೇ ಗಂಡ ವಿಜಯ್ ನ ಜೊತೆ ಕಳುಹಿಸಿದ್ದರು.. ಆದರೆ ಇತ್ತ ವಿಜಯ್ ಗೆ ಅದೇನಾಗಿತ್ತೋ ಪುಟ್ಟ ಮಗು ಒಳ್ಳೆಯ ಹೆಂಡತಿ.. ಸಂಸಾರಕ್ಕೆ ಇನ್ನೇನು ಬೇಕು ಎನ್ನುವಂತಿತ್ತು ಈ ಕುಟುಂಬ.. ಒಂದೊಳ್ಳೆ ಜೀವನ ಕಟ್ಟಿಕೊಳ್ಳಬಹುದಾಗಿತ್ತು.. ಆದರೆ ವಿಜಯ್ ಮಾಡಿದ್ದೇ ಬೇರೆ.. ಆತನಿಗೆ ಹಣದ ದಾಹ ಹೆಚ್ಚಾಗಿತ್ತು.. ಅದರಲ್ಲಿಯೂ ದುಡಿದು ಗಳಿಸುವ ಹಣದ ದಾಹವಲ್ಲ.. ಹೆಂಡತಿಯ ತವರು ಮನೆಯಿಂದ ಬಿಟ್ಟಿಯಾಗಿ ಬರುವ ಹಣದ ಮೇಲಿನ ದಾಹ ಹೆಚ್ಚಾಗಿತ್ತು.. ಮಗುವಿನ ಜೊತೆ ಬಂದ ಬಾಣಂತಿಗೆ ಪ್ರೀತಿ ನೀಡಿ ಹಾರೈಕೆ ಮಾಡುವ ಬದಲು ವಿಜಯ್ ಪ್ರತಿದಿನವೂ ತವರು ಮನೆಯಿಂದ ಹಣ ತರುವಂತೆ ನೋವು ನೀಡುತ್ತಿದ್ದನು..

ವಿಜಯ್ ಮಾತ್ರವಲ್ಲ ಆತನ ಕುಟುಂಬವೂ ಪ್ರತಿದಿನ ಹಣಕ್ಕಾಗಿ ನಂದಿನಿಗೆ ನೋವು ನೀಡುತ್ತಿದ್ದರಂತೆ.. ಇದೇ ರೀತಿ ಹಣ ತರುವಂತೆ ಮೊನ್ನೆಯೂ ಮಾತಿಗೆ ಮಾತು ನಡೆದಿದೆ.. ಇತ್ತ ವಿಜಯ್ ನಂದಿನಿಯ ಮೇಲೆ ಕೈ ಮಾಡಿದ್ದಾನೆ.. ಹಸಿ ಬಾಣಂತಿ ಅದಾಗಲೇ ಸೂಕ್ಷ್ಮವಾಗಿದ್ದ ನಂದಿನಿಗೆ ಬಹಳ ಪೆಟ್ಟಾಗಿ ಕುಸಿದು ಬಿದ್ದಳು.. ನಂತರ ಭಯಪಟ್ಟು ಆತನೇ ಆಸ್ಪತ್ರೆಗೂ ದಾಖಲು ಮಾಡಿದ.. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.. ಮೈಮೇಲೆಲ್ಲಾ ಸಾಕಷ್ಟು ಪೆಟ್ಟು ತಿಂದಿದ್ದ ನಂದಿನಿಗೆ ಬಹುಶಃ ಈ ಜೀವನ ಸಾಕೆನಿಸಿತ್ತೋ ಏನೋ.. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದು ಬಿಟ್ಟಳು.. ಇತ್ತ ಹನ್ನೊಂದು ತಿಂಗಳ ಪುಟ್ಟ ಕಂದಮ್ಮ ತಾಯಿ ಇಲ್ಲದೇ ಅನಾಥವಾಗಿ ಹೋಯ್ತು..

ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇದಕ್ಕೆಲ್ಲಾ ವಿಜಯ್ ನೇ ಕಾರಣವೆಂದು ನಂದಿನಿಯ ಕುಟುಂಬದವರು ನಡೆದ ವಿಚಾರಗಳನ್ನು ತಿಳಿಸಿದ್ದಾರೆ… ಆದರೆ ಇತ್ತ ವಿಜಯ್ ನಂದಿನಿಯನ್ನು ಮಾತ್ರವಲ್ಲ ಆ ಪುಟ್ಟ ಕಂದಮ್ಮನನ್ನು ಸಹ ಇಲ್ಲವಾಗಿಸಲು ಪ್ರಯತ್ನಿಸಿದ್ದನಂತೆ.. ನಿಜಕ್ಕೂ ತಂದೆ ಎನಿಸಿಕೊಂಡವನು ಮಕ್ಕಳಿಗಾಗಿ ತಮ್ಮ ಜೀವ ಜೀವನವನ್ನೇ ಮುಡಿಪಾಗಿಡುವುದನ್ನು ನೋಡಿದ್ದೇವೆ.. ಆದರೆ ಕೇವಲ ಹನ್ನೊಂದು ತಿಂಗಳ ಪುಟ್ಟ ಕಂದಮ್ಮನ ಮುಂದೆಯೇ ತಾಯಿಯನ್ನು ಇಲ್ಲವಾಗಿಸಿ ಕೊನೆಗೆ ಮಗುವನ್ನೂ ಸಹ ಇಲ್ಲವಾಗಿಸಲು ಪ್ರಯತ್ನ ಪಟ್ಟಿದ್ದು ನಿಜಕ್ಕೂ ಆತನದೊಂದು ಬದುಕಾ ಎನ್ನುವಂತಿದೆ..

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ ಪ್ರೋತ್ಸಾಹಿಸಿ.

ಮನುಷ್ಯ ಸುಮ್ಮನೆ ಬೇಡದ ಆಸೆಗಳಿಗೆ ಬಿದ್ದು ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ ಎಂಬುದಕ್ಕೆ ಇವರ ಜೀವನವೇ ನೈಜ್ಯ ಉದಾಹರಣೆ.. ಆಕೆಯನ್ನು ಇಲ್ಲವಾಗಿ ಆ ಮಗುವಿಗೆ ತಾಯಿ ಪ್ರೀತಿಯನ್ನು ಕಿತ್ತುಕೊಂಡ ಆ ವಿಜಯ್ ಗೆ ಏನು ಸಿಕ್ಕಿತು.. ಆತನೂ ಪೋಲೀಸರ ಪಾಲೆ.. ಆದರೆ ಆ ಹೆಣ್ಣು ಮಗಳು ಏನು ತಪ್ಪು ಮಾಡಿದ್ದಳು.. ಆ ಹಸಗೂಸು ಏನು ತಪ್ಪು ಮಾಡಿತ್ತು.. ತಾಯಿಯ ಹಾಲು ಕುಡಿದು ಬೆಚ್ಚಗೆ ತಾಯಿಯ ಮಡಿಲಲ್ಲಿ ಮಲಗಬೇಕಾದ ಸಮಯದಲ್ಲಿ ತಾಯಿಯಿಲ್ಲದೇ ಜೀವನ ಪೂರ್ತಿ ನೋವಿನ ಜೊತೆಗೆ ಸಾಗಿಸಬೇಕು.. ನಿಮ್ಮಂತವರಿಗೆ ಯಾಕ್ರಯ್ಯಾ ಬೇಕು ಸಂಸಾರ ಹೆಂಡತಿ ಮಕ್ಕಳು.. ಛೇ.. ಆ ಎಳೆ ಮಗು ನೆನಸಿಕೊಂಡರೆ ಸಂಕಟವಾಗುತ್ತದೆ.. ಏನು ತಪ್ಪೇ ಮಾಡದ ಹೆಂಡತಿ ಜೀವವಿಲ್ಲದ ಸ್ಥಿತಿ.. ತಪ್ಪು ಮಾಡಿದ ಗಂಡ ಪೊಲೀಸರ ಬಳಿ.. ಆ ಮಗುವಿನ ಅಳುವಿಗೆ ಉತ್ತರ? ಆ ಭಗವಂತನೇ ಕೊಡಬೇಕು.. ಇಂತವರಿಗೆ ಮಕ್ಕಳನ್ನೇ ಕೊಡಬೇಡಪ್ಪಾ ತಂದೆ..