ಸದ್ಯ ಇದೀಗ ವಿನಯ್ ಗುರೂಜಿಯವರ ಒಂದು ವಿಡಿಯೋ ವೈರಲ್ ಆಗಿದೆ ವಿಡಿಯೋದಲ್ಲಿ ನೋಡುವ ಹಾಗೆ ಒಂದಷ್ಟು ಜನ ಇದಾರೆ.. ಅದರಲ್ಲಿ ವಿನಯ್ ಗುರೂಜಿ ಅವರು ಅಲ್ಲಾಡುತ್ತಿರುವುದನ್ನು ಗಮನಿಸಬಹುದು.. ನಂತರ ಅವರು ಕುಡಿದ ಮತ್ತಿನಲ್ಲೇನೋ ಗೊತ್ತಿಲ್ಲ ಆದರೆ ಒಬ್ಬ ಹಿರಿಯ ವ್ಯಕ್ತಿ ತಲೆ ಮೇಲೆ ಕಾಲಿಟ್ಟಿದ್ದಾರೆ.. ಇದನ್ನು ನೋಡುವ ಹಾಗೆ ಅಲ್ಲಿರುವವರು ಎಲ್ಲರೂ ಕೂಡ ವಿನಯ್ ಗುರೂಜಿ ಅವರಿಗೆ ಸಂಬಂಧಪಟ್ಟಂತವರು ಆದರೆ ಒಬ್ಬ ಶಿಕ್ಷಕನ ತಲೆಯ ಮೇಲೆ ಕಾಲಿಟ್ಟಿರುವುದನ್ನು ನೋಡುವುದಾದರೆ ಕುಡಿದ ಮತ್ತಿನಲ್ಲಿ ಈ ರೀತಿ ಮಾಡಿದ್ದಾರೆ ಎನ್ನುವುದು ಖಚಿತವಾಗಿದೆ.. ತನಗೆ ತಾನು ಗುರೂಜಿ ಎಂದುಕೊಂಡು ತನಗೆ ತಾನು ಅವಧೂತ ಅಂದುಕೊಂಡು ಅದರಲ್ಲೂ ಒಬ್ಬ ಹಿರಿಯ ವ್ಯಕ್ತಿಯ ತಲೆಯ ಮೇಲೆ ಈ ರೀತಿ ಕಾಲಿಟ್ಟಿರುವುದು ಎಷ್ಟು ಸರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

ಆದರೆ ಈ ವಿಡಿಯೋ ಬಹಳ ಅಳೆಯದು ಆದರೆ ಈಗ ತುಂಬಾನೇ ವೈರಲ್ ಆಗಿದ್ದು ಗುರೂಜಿಯ ಮೇಲೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ ಅಂದ್ರೆ ತಪ್ಪಾಗಲಾರದು.. ಇನ್ನು ಕೆಲವರು ಗುರೂಜಿಗೆ ಸಂಬಂಧಪಟ್ಟಂತವರು ಅವರ ಆಪ್ತರು ಇದೆಲ್ಲ ಬೇಕಾಗಿ ಕ್ರಿಯೇಟ್ ಮಾಡಿದ್ದಾರೆ ಗುರೂಜಿಯ ಹೆಸರನ್ನು ಹಾಳು ಮಾಡುವ ಸಲುವಾಗಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.. ವಿನಯ್ ಗುರೂಜಿಯ ಬಗ್ಗೆ ತಿಳಿದುಕೊಳ್ಳುವುದಾದರೆ ವಿನಯ್ ಗುರೂಜಿ ಅವರು ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾರೆ.. ಇದಾದ ನಂತರ ಕೇರಳಾಗಿ ಹೋಗ್ತಾರೆ.. ಅಲ್ಲಿ ಒಂದಷ್ಟು ಆಧ್ಯಾತ್ಮಿಕವಾಗಿ ಜ್ಯೋತಿಷ್ಯದ ಬಗ್ಗೆ ಮಾಹಿತಿಗಳನ್ನ ಅರಿತು ಮತ್ತೆ ಮಲೆನಾಡಿಗೆ ಬರ್ತಾರೆ.. ಅಲ್ಲೇ ಒಂದು ಆಶ್ರಮವನ್ನು ಕೂಡ ಕಟ್ಟುತ್ತಾರೆ. ಆಶ್ರಮವನ್ನು ಕಟ್ಟಿದಾದ್ಮೇಲೆ ಒಬ್ಬರಾದ ಮೇಲೆ ಒಬ್ಬರು ಈ ಗುರೂಜಿಯನ್ನು ಭೇಟಿ ಮಾಡಲು ಶುರು ಮಾಡ್ತಾರೆ ಹಾಗೆ ಒಬ್ಬರಿಂದ ಒಬ್ಬರಿಗೆ ಗುರೂಜಿಯ ಬಗ್ಗೆ ಮಾಹಿತಿಗಳು ಸ್ಪ್ರೆಡ್ ಆಗುತ್ತೆ.
ಇದೇ ರೀತಿ ವಿನಯ್ ಗುರೂಜಿ ಫೇಮಸ್ ಆಗ್ತಾನೆ ಹೋಗ್ತಾರೆ ತದನಂತರ ದೊಡ್ಡ ದೊಡ್ಡ ರಾಜಕಾರಣಿಗಳು ಕೂಡ ಪರಿಚಯ ಆಗ್ತಾರೆ.. ಯಡಿಯೂರಪ್ಪ, ಕುಮಾರಸ್ವಾಮಿ, ಡಿ ಕೆ ಶಿವಕುಮಾರ್ ಇನ್ನೂ ಸಾಕಷ್ಟು ರಾಜಕಾರಣಿಗಳು ತಮ್ಮ ಭವಿಷ್ಯವನ್ನು ಕೇಳಲು ವಿನಯ್ ಅವದುತ ಗುರೂಜಿ ಅವರತ್ರ ಹೋಗ್ತಾರೆ.. ಯಾವಾಗ ವಿನಯ್ ಗುರೂಜಿ ಅವರತ್ರ ರಾಜಕಾರಣಿಗಳು ಹೋಗ್ತಾರೋ ಆಗ ವಿನಯ್ ಗುರೂಜಿ ಇನ್ನು ಕರ್ನಾಟಕದ್ಯಂತ ಫೇಮಸ್ ಆಗ್ತಾರೆ. ಮತ್ತೊಂದು ಕಡೆ ಅವರ ಆಶ್ರಮ ಕೂಡ ದೊಡ್ಡದಾಗಿ ಬೆಳೆಯೋದಕ್ಕೆ ಶುರು ಮಾಡುತ್ತೆ.. ಒಟ್ಟಿನಲ್ಲಿ ವಿನಯ್ ಗುರೂಜಿ ಬಗ್ಗೆ ಹೇಳುವುದಾದರೆ ತಮ್ಮ ವ್ಯಕ್ತಿತ್ವ ಮೂಲಕ ನಿರ್ಧಾರ ತೆಗೆದುಕೊಳ್ಳುವಂತಹ ವ್ಯಕ್ತಿ.

ಅದೇ ರೀತಿ ಇದುವರೆಗೂ ಯಾವುದೇ ಮೋಸ ಮಾಡಿದ್ದಾರೆ ಅನ್ನುವ ಅಪರಾಧಗಳು ಕೇಳಿ ಬಂದಿಲ್ಲ.. ಇನ್ನು ವಿನಯ್ ಗುರೂಜಿ ಆ ದೇವರನ್ನು ಪೂಜೆ ಮಾಡಿ ಈ ದೇವರನ್ನು ಪೂಜೆ ಮಾಡಿ ಈ ರೀತಿ ಮಾಡಿದರೆ ಈ ರೀತಿ ಆಗುತ್ತದೆ ಎನ್ನುವ ಮೌಡ್ಯತೆಯನ್ನು ಯಾರಿಗೆ ಕೂಡ ತಿಳಿಸಿಲ್ಲ.. ಜಾತಿ ಧರ್ಮ ಭೇದ ಭಾವವನ್ನು ಕೂಡ ಇದುವರೆಗೂ ಮಾಡಿಲ್ಲ ಬಡವ ಶ್ರೀಮಂತ ಎನ್ನದೆ, ಜಾತಿ ಧರ್ಮ ಎನ್ನದೆ ಎಲ್ಲರೂ ಕೂಡ ನನ್ನ ಆಶ್ರಮಕ್ಕೆ ಬರಬಹುದು ಎನ್ನುವ ಮಾತು ಕೂಡ ವಿನಯ್ ಗುರೂಜಿ ಹೇಳಿದ್ದಾರೆ.. ಆಶ್ರಮಕ್ಕೆ ಬಂದವರು ಇದೇ ರೀತಿ ಡ್ರೆಸ್ ಹಾಕೊಂಡು ಬನ್ನಿ ಅಂತ ಹೇಳಿಲ್ಲ.. ಅದೇ ರೀತಿ ಬಂದವರು ನೀವು ಇಷ್ಟೇ ಕಾಣಿಕೆಯನ್ನು ಕೊಡಿ ಅಂತ ಇದುವರೆಗೂ ಕೇಳಿಲ್ಲ.. ಅವರಿಗೆ ಇಷ್ಟ ಆದರೆ ಕೊಡಬಹುದು ಇಲ್ಲ ಅಂದರೆ ವಿನಯ್ ಗುರೂಜಿಯ ಮಾತುಗಳನ್ನ ಕೇಳಿ ಸಂತೃಪ್ತವಾಗಿ ಹೋಗಬಹುದು..
ಇನ್ನು ಕೆಲವರು ವಿನಯ್ ಗುರೂಜಿ ಬಗ್ಗೆ ಏನು ಹೇಳ್ತಾರೆ ಅಂದರೆ ಇವರು ಹಣ ಮಾಡೋದಿಕ್ಕೆ ಈ ರೀತಿ ವೇಷ ಹಾಕಿದ್ದಾರೆ ಸಾಕಷ್ಟು ದುಡ್ಡು ಮಾಡಿದ್ದಾರೆ ರಾಜಕಾರಣಿಗಳು ಕೂಡ ಬೇಜಾನ್ ಇವರಿಗೆ ಕೊಟ್ಟಿದ್ದಾರೆ ಅಂತ ಹೇಳ್ತಿದ್ದಾರೆ.. ವಿನಯ್ ಗುರೂಜಿ ದುಡ್ಡು ಮಾಡೋದಿಕ್ಕೆ ಈ ರೀತಿ ಮಾಡ್ತಿದ್ದಾರೆ ಅಂತ ಇದ್ರೆ ವಾರ ಪೂರ್ತಿ ಕೂಡ ಭಕ್ತರಿಗೆ ಆಶ್ರಮಕ್ಕೆ ಬರಲು ಅವಕಾಶವಿರುತ್ತಿತ್ತು.. ವಾರದಲ್ಲಿ ಎರಡು ದಿನ ಮಾತ್ರ ಅಂದ್ರೆ ಗುರುವಾರ ಅಥವಾ ಶುಕ್ರವಾರವೋ ಆಶ್ರಮಕ್ಕೆ ಹೋಗಲು ಅವಕಾಶವಿದೆ.. ನಾವು ಹೇಳಲು ಹೊರಟಿರುವುದೇನೆಂದರೆ ಬೇರೆ ಗುರೂಜಿಗಳಿಗೂ ಮತ್ತು ವಿನಯ್ ಗುರೂಜಿಗೂ ಕಂಪೇರ್ ಮಾಡಿದರೆ ವಿನಯ್ ಗುರೂಜಿ ವಿಭಿನ್ನ.. ಯಾವುದೇ ರೀತಿ ಮೌಡ್ಯತೆಯನ್ನ ತುಂಬಿಲ್ಲ ಜನರಿಗೆ.. ಈ ರೀತಿ ಮಾಡಿದ್ರೆ ನಿನಗೆ ಅದೃಷ್ಟ ಒಲಿಯುತ್ತೆ. ಆ ರೀತಿ ಮಾಡಿದ್ರೆ ದುಡ್ಡು ಮಾಡಬಹುದು ಎನ್ನುವ ಮಾತುಗಳನ್ನ ಇದುವರೆಗೂ ಭಕ್ತರಿಗೆ ತಿಳಿಸಿಲ್ಲ.. ಆದರೆ ಭಕ್ತರಿಗೆ ತನ್ನದೇ ಆದ ಮಾತುಗಳಿಂದ ಒಳ್ಳೆಯ ಪ್ರವಚನಗಳನ್ನ ಮಾತ್ರ ತಿಳಿಸುತ್ತಾರೆ..

ನೀವು ಕೂಡ ನಿಮ್ಮ ಕೈಯಲ್ಲೇ ಇದೆ ಎನ್ನುವ ಮಾತುಗಳನ್ನ ಆ ಮನುಷ್ಯ ಹೇಳ್ತಿರ್ತಾರೆ.. ಆದ್ರೂ ವಿನಯ್ ಗುರೂಜಿಯ ಒಂದಷ್ಟು ವಿಡಿಯೋಗಳು, ವಾಯ್ಸ್ ಕಾಲ್ ರೆಕಾರ್ಡಿಂಗ್ಸ್ ಇವೆಲ್ಲವೂ ಕೂಡ ಆಗಾಗ ವೈರಲ್ ಆಗ್ತಾ ಇರ್ತಾವೆ.. ಆದರೆ ಇದಕ್ಕೆ ಮಾತ್ರ ಯಾವುದಕ್ಕೂ ಸಮರ್ಥನೆ ಮಾಡಿಕೊಳ್ಳೋದಕ್ಕೆ ಹೋಗೋದಿಲ್ಲ.. ಒಬ್ಬ ಹಿರಿಯ ವ್ಯಕ್ತಿಯ ಮೇಲೆ ಕಾಲಿಟ್ಟಿದ್ದು ಸರಿ ಎಂಬ ವಿಷಯದಲ್ಲಿ ಸಮರ್ಥನೆ ಮಾಡಿಕೊಳ್ಳುವುದಿಲ್ಲ.. ಅವರ ಆತ್ಮೀಯ ವಲಯದಲ್ಲಿ ಏನೋ ಒಂದು ಎಡವಟ್ಟು ಆಗಿರಬಹುದು.. ಸದ್ಯ ಗೊತ್ತಾಗಿರುವ ಪ್ರಕಾರ ಅಲ್ಲಿರುವವರೆಲ್ಲರೂ ಕೂಡ ಗುರೂಜಿಗೆ ಆತ್ಮೀಯರು.. ಹೀಗಾಗಿ ಅಲ್ಲಿ ಒಂದು ಎಡವಟ್ಟು ಆಗಿರಬಹುದು. ಇನ್ನೊಂದು ವಲಯದಲ್ಲಿ ವಿನಯ್ ಗುರೂಜಿಯನ್ನು ಸಮಸ್ಯೆಗೆ ಸಿಲುಕಿಸುವ ಸಲುವಾಗಿಯೇ ಈ ರೀತಿ ಮಾಡಿರಬಹುದು..
ಇನ್ನೊಂದು ವಿನಯ್ ಗುರೂಜಿ ಆ ಸಂದರ್ಭದಲ್ಲಿ ತುಂಬಾನೇ ಮದ್ಯಪಾನ ಮಾಡಿದ್ರು ತುಂಬಾನೇ ವಾಲಾಡ್ತಿದ್ರು ವಾಲಾಡ್ಕೊಂಡು ಅವರ ತಲೆ ಮೇಲೆ ಕಾಲಿಟ್ಟಿದ್ದಾರೆ ಎಂಬ ಮಾತು ಕೂಡ ಇದೆ.. ಇದು ಗೊತ್ತಿಲ್ಲ ನಿಜವಾಗಲೂ ಅವರು ಮಧ್ಯಪಾನ ಸೇವನೆ ಮಾಡಿ ಈ ರೀತಿ ಮಾಡಿದ್ರಾ? ಎನ್ನುವುದು ಖಚಿತವಾಗಿ ತಿಳಿದಿಲ್ಲ.. ವಿನಯ್ ಗುರೂಜಿ ಬಗ್ಗೆ ಹೇಳುವುದಾದರೆ ಬೇರೆ ಬೇರೆ ಗುರೂಜಿಗಳಿಗೆ ಹೋಲಿಸಿಕೊಂಡರೆ ಇವರು ಡಿಫ್ರೆಂಟ್ ವ್ಯಕ್ತಿ. ಯಾರಿಗೂ ಕೂಡ ಮೋಸ ಮಾಡಿಲ್ಲ ಇದುವರೆಗೂ.. ಆದರೆ ಈ ವಿಡಿಯೋ ಬಗ್ಗೆ ಅಸಲಿಯತ್ತೇನು ಎನ್ನುವುದು ಖಚಿತವಾಗಿ ತಿಳಿದಿಲ್ಲ ಆದರೆ ಒಂದಂತೂ ಸತ್ಯ ಅದೇನೇ ಆಗಲಿ ಗುರೂಜಿ ಒಬ್ಬ ಹಿರಿಯ ವ್ಯಕ್ತಿ ಮೇಲೆ ಕಾಲಿಟ್ಟಿದ್ದು ಸರಿ ಇಲ್ಲ…