Advertisements

ಖ್ಯಾತ ನಟಿ ವಿನಯ ಪ್ರಸಾದ್ ಅವರ ಮಗಳು ಯಾರು ಗೊತ್ತಾ.? ತಾಯಿಗಿಂತ ಮಗಳು ಸುಂದರಿ..

Cinema Entertainment

ನಮಸ್ತೆ ಸ್ನೇಹಿತರೆ, ನಟಿ ವಿನಯ ಪ್ರಸಾದ್ 80ರ ದಶಕದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಪ್ಪಟ ಕನ್ನಡ ಪ್ರತಿಭೆ . ಮೂಲತಃ ಉಡುಪಿಯವರಾದ ವಿನಯ ಪ್ರಸಾದ್, ಮೊದಲ ಬಾರಿಗೆ ನಾಯಕಿಯಾಗಿ ಗಣೇಶನ ಮದುವೆ ಸಿನಿಮಾದಲ್ಲಿ ಅನಂತ್ ನಾಗ್ ಅವರ ಜೊತೆ ನಟಿಸಿದ್ದಾರೆ. ನಂತರ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಯಶಸ್ಸು ಪಡೆದರು. ವಿನಯ ಪ್ರಸಾದ್ ಅವರ ವೈಯಕ್ತಿಯ ಜೀವನದ ಬಗ್ಗೆ ನಿಮಗೆ ಎಷ್ಟು ಗೊತ್ತು ? ವಿನಯ ಪ್ರಸಾದ್ ಅವರ ಮಗಳು ಕೂಡ ಪ್ರಸಿದ್ಧ ನಟಿ..

Advertisements
Advertisements

ವಿನಯ ಪ್ರಸಾದ್ ಅವರು ವಿ.ಆರ್.ಕೆ ಪ್ರಸಾದ್ ಅವರೊಡನೆ 1988 ರಲ್ಲಿ ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗಳು. ಇವರ ಮಗಳ ಹೆಸರು ಪ್ರಥಮ ಪ್ರಸಾದ್. ಆದರೆ ವಿಧಿ ಆಟದಲ್ಲಿ 1995 ರಲ್ಲಿ ಚಿಕ್ಕ ವಯಸ್ಸಿನಲ್ಲೇ ಪತಿ ಪ್ರಸಾದ್ ಅವರು ತೀರಿಕೊಂಡರು. ನಂತರ ವಿನಯ ಪ್ರಸಾದ್ 2002ರಲ್ಲಿ ಜ್ಯೋತಿ ಪ್ರಕಾಶ್ ಎಂಬ ವ್ಯಕ್ತಿಯ ಜೊತೆ ವಿವಾಹವಾದರು. ಇವರ ಮಗಳು ಪ್ರಥಮ ಪ್ರಸಾದ್ ಕೂಡ ತಾಯಿಯಂತೆ ಉತ್ತಮ ನಟಿ ಮತ್ತು ನೃತ್ಯಗಾರ್ತಿ. 2010 ರಲ್ಲಿ ಪ್ರಥಮ ಪ್ರಸಾದ್ ‘ಮಿಲನ’ ಸಿನಿಮಾದ ನಿರ್ದೇಶಕ ಪ್ರಕಾಶ್ ಅವರು ನಿರ್ದೇಶಿಸಿದ ಬೊಂಬೆಯಾಟವಯ್ಯ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಈಗ ಪ್ರಥಮ ಪ್ರಸಾದ್ ಅವರು ನಟನೆ ಶುರು ಮಾಡಿ 10 ವರ್ಷ ಆಗಿದೆ.

ಪ್ರಥಮ ಪ್ರಸಾದ್ ಅವರು ಚೌಕಾಬಾರ ಸಿನಿಮಾದಲ್ಲಿ ಹೀರೋಯಿನ್ ಅಕ್ಕನ ಪಾತ್ರದಲ್ಲಿ ನಟಿಸಿದ್ದರು. ನಂತರ ಶ್ರುತಿ ನಾಯ್ಡು ನಿರ್ಮಾಣದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಪುಟ್ಟತ್ತೆ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಬಹಳ ಜನಪ್ರಿಯತೆ ತಂದುಕೊಟ್ಟಿತ್ತು, ಇಂದಿಗೂ ಕೂಡ ಜನರು ಪ್ರಥಮ ಪ್ರಸಾದ್ ರನ್ನು ಪುಟ್ಟತ್ತೆ ಎಂದೇ ಗುರುತಿಸುತ್ತಾರೆ.