Advertisements

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಎಷ್ಟು ಜನ ತಂಗಿಯರು ಗೊತ್ತಾ?

Cinema

ಸ್ನೇಹಿತರೆ, ಒಮ್ಮೆಯಾದರೂ ಡಾಕ್ಟರ್ ವಿಷ್ಣುವರ್ಧನ್ ಅವರ ತಂಗಿಯಾಗಬೇಕಿತ್ತು ಎಂದು ಬಯಸುವಂತಹ ಹೆಣ್ಣು ಮಕ್ಕಳ ಸಂಖ್ಯೆ ಒಂದಲ್ಲ ಎರಡಲ್ಲ. ಹೌದು ಗೆಳೆಯರೇ ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಕನ್ನಡಿಗರು ಎಂದು ಮರೆಯದ ಹೃದಯವಂತ, ಕರುಣಾಮಯಿ. ವಿಷ್ಣುವರ್ಧನ್ ಅವರೊಳಗೆ ಇದ್ದಂತಹ ಒಳ್ಳೆಯ ಗುಣ ಅವರು ನಡೆದುಕೊಳ್ಳುತ್ತಿದಂತಹ ರೀತಿ ಇದರನ್ನು ಗೌರವಿಸುತ್ತಿದಂತಹ ಗುಣ ಪ್ರತಿ ಒಬ್ಬರಿಗೂ ಸ್ಪೂರ್ತಿದಾಯಕವಾದ ಮಾರ್ಗ ಎಂದರೆ ತಪ್ಪಾಗಲಾರದು. ಹೀಗಾಗಿ ಅಲ್ಲವೇ ವಿಷ್ಣುವರ್ಧನ್ ಎಂದ ತಕ್ಷಣ ಅವರಲ್ಲಿದ್ದಂತಹ ಅವರ ಸರಳತೆ ಮತ್ತು ಸೌಜನ್ಯ

ಕಣ್ಣ ಮುಂದೆ ಭಾಸವಾಗುತ್ತದೆ. ವಿಷ್ಣುವರ್ಧನ್ ಅವರ ಮಾನವೀಯ ಗುಣಗಳು, ಅವರ ದಾನ ಧರ್ಮಗಳು, ಅವರಿಗಿದ್ದ ಆಧ್ಯಾತ್ಮಿಕ ಸೆಳೆತ ಎಲ್ಲವೂ ನೆನಪಾಗುತ್ತದೆ. ವಿಷ್ಣುವರ್ಧನ್ ಎಂದರೆ ನಮಗೆ ಕೇವಲ ಒಬ್ಬ ನಟ ಎಂದು ಮಾತ್ರ ನೆನಪಾಗುವುದಿಲ್ಲ, ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದರು. ಕನ್ನಡ ಸಿನಿಮಾರಂಗದ ಶಕ್ತಿಯಾಗಿದ್ದರು. ವಿಷ್ಣುವರ್ಧನ್ ಅವರು ಇನ್ನೂ ಇರಬೇಕಿತ್ತು, ಇನ್ನಷ್ಟು ವರ್ಷ ಸಿನಿಮಾರಂಗದಲ್ಲಿ ಬೆಳಗ ಬೇಕಿತ್ತು, ಅದೆಷ್ಟೋ ಯುವ ಪ್ರತಿಭೆಗಳಿಗೆ ಬೆಳಕಾಗಬೇಕಿತ್ತು, ದಾರಿದೀಪವಾಗಿ ಪ್ರೇರಣೆಯ ಮಾರ್ಗ ತೋರಬೇಕಿತ್ತು ಎನಿಸುತ್ತದೆ.

ವಿಷ್ಣುವರ್ಧನ್ ಅವರು ನಮ್ಮೊಂದಿಗಿಲ್ಲ ಆದರೆ ಅವರು ನಟಿಸಿರುವ ಚಿತ್ರಗಳು, ಚಿತ್ರದಲ್ಲಿನ ಅವರ ಪಾತ್ರಗಳು ನಮ್ಮನ್ನು ಸದಾ ರಂಜಿಸುತ್ತಲೇ ಇರುತ್ತದೆ. ನಾಗರಹಾವು ಚಿತ್ರದ ರಾಮಾಚಾರಿ, ಭೂತಯ್ಯನ ಮಗ ಅಯ್ಯು ಚಿತ್ರದ ಗುಳ್ಳ, ಬಂಧನ ಚಿತ್ರದ ಡಾಕ್ಟರ್ ಹರೀಶ್ ಹೀಗೆ ಹಲವಾರು.. ಪಾತ್ರಗಳಲ್ಲಿ ವಿಷ್ಣುವರ್ಧನ್ ಕನ್ನಡಿಗರನ್ನು ರಂಜಿಸಿದ್ದಾರೆ. ನಿಷ್ಕಲ್ಮಶ ಪ್ರೇಮಿಯಾಗಿ, ಅನ್ನ ನೀಡುವ ರೈತನಾಗಿ, ದೇಶ ಕಾಯುವ ಯೋಧನಾಗೆ ಮಾಡಿರುವಂತಹ ಎಷ್ಟು ಪಾತ್ರಗಳಿಂದ ಡಾಕ್ಟರ್ ವಿಷ್ಣುವರ್ಧನ್ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದವರು. ಅಷ್ಟೇ ಅಲ್ಲದೆ ಸುಮಾರು 220 ಕನ್ನಡ ಸಿನಿಮಾಗಳಲ್ಲಿ ವಿಷ್ಣು ಅಭಿನಯಿಸಿದ್ದಾರೆ.

ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಭಾರತಿ ಅವರನ್ನು ಮದುವೆಯಾದ ವಿಷ್ಣುವರ್ಧನ್ ಅವರಿಗೆ ಒಬ್ಬ ಅಣ್ಣ ಮತ್ತು ನಾಲ್ಕು ಜನ ತಂಗಿಯರು. ಅಣ್ಣನ ಹೆಸರು ಎನ್ ರವಿಕುಮಾರ್ ಮತ್ತು ತಂಗಿಯರ ಹೆಸರು ಇಂದ್ರಣಿ, ಜಯಶ್ರಿ, ರಮಾ ಮತ್ತು ಪೂರ್ಣಿಮಾ. ಇವರೆಲ್ಲರೂ ತಮ್ಮ ವೈಯಕ್ತಿಕ ಬದುಕಿನ ಕಡೆಗೆ ಗಮನಹರಿಸಿ ಸಿನಿಮಾರಂಗದಿಂದ ದೂರ ಉಳಿದರು ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.