Advertisements

70 ವರ್ಷಗಳಿಂದ ಮುಚ್ಚಿದ್ದ ಕೋಣೆಯನ್ನು ತೆಗೆದ ಕುಟುಂಬಸ್ಥರಿಗೆ ಕಾದಿತ್ತು ಬಿಗ್ ಶಾ’ಕ್! ಅಲ್ಲಿ ಸಿಕ್ಕ ನಿ’ಗೂಢ ವಸ್ತುಗಳೇನು‌ ಗೊತ್ತಾ?

Kannada News

ನಮಸ್ತೆ ಸ್ನೇಹಿತರೆ, 70 ವರ್ಷಗಳಿಂದ ಮನೆಯೊಂದಲ್ಲಿ ಒಂದು ಕೋಣೆಯನ್ನು ಮುಚ್ಚಲಾಗಿತ್ತು, ಬಾಗಿಲು ತೆರೆದ ಕೂಡಲೇ ಕುಟುಂಬದ ಅದೃಷ್ಟ ಬಂದು ಬಡಿದಂತಾಗಿದೆ. ಈ ಕೋಣೆಯನ್ನು ತೆರೆದ ಮೇಲೆ, 200 ವರ್ಷಗಳಷ್ಟು ಹಳೆಯದಾದ ನಿ’ಧಿ ಸಿಕ್ಕಿದೆ, ಇದನ್ನ ಕಂಡ ಕುಟುಂಬಸ್ಥರು ಆಶ್ಚರ್ಯವಾಗಿದ್ದಾರೆ. ಮನೆಯಲ್ಲಿನ ಆ ಒಂದು ಕೋಣೆ 70 ವರ್ಷಗಳಿಂದ ಮುಚ್ಚಿಯೇ ಇತ್ತು, ಆದರೆ ಒಂದು ದಿನ ಆ ಕೋಣೆಯ ಮುಚ್ಚಿದ ಬಾಗಿಲು ತೆರೆದಾಗ ಎಲ್ಲರೂ ಶಾ’ಕ್ ಆದರು. ಆ ಕೋಣೆಯಲ್ಲಿ ಸುಮಾರು 200 ವರ್ಷಗಳ ಪುರಾತನವಾದ ನಿಧಿ ಸಿಕ್ಕಿದ್ದೆ. ಉತ್ತರಾಖಂಡದ ರುದ್ರಪ್ರಯಾಗ್‌ನಲ್ಲಿರುವ ಅಗಸ್ತ್ಯಮುನಿ ಬ್ಲಾಕ್‌ನ ಸುಪುರಿ ಗ್ರಾಮದಲ್ಲಿ ಈ ನಡೆದಿದ್ದು, ಮನೆಯಲ್ಲಿ ಇದ್ದ ಆ ಕೊಠಡಿಯಲ್ಲಿ 200 ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳು ದೊರೆತಿವೆ. ಈ ಹಸ್ತಪ್ರತಿಗಳ ಭಾಷೆಯನ್ನು ಸ್ಪಷ್ಟವಾಗಿ ಓದಲು ಆಗದ ಸ್ಥಿತಿಯಲ್ಲಿದೆ, ಆದರೆ 1785 ಮತ್ತು 1832 ರ ನಡುವೆ ರಚಿಸಲಾಗಿದೆ ಎಂದು ತಿಳಿದುಬಂದಿದೆ.

Advertisements
Advertisements

ಈ ಕೊಠಡಿಯನ್ನು ತೆರೆಯಲು ಮುಖ್ಯ ಕಾರಣವೇನೆಂದರೆ, ಮನೆಯವರು ದೀಪಾವಳಿ ಹಬ್ಬದ ಪ್ರಯುಕ್ತ ಮನೆಯನ್ನು ಸ್ವಚ್ಛಗೊಳಿಸುತ್ತಿರುತ್ತಾರೆ. ಆಗ ತಮ್ಮ ಅಜ್ಜ ದಿವಂಗತ ಠಾಕೂರ್ ಹೀರಾ ಸಿಂಗ್ ಬರ್ತ್ವಾಲ್ ವಾಲಾ ರವರ ಕೊಠಡಿ ಸಹ ಸ್ವಚ್ಛ ಮಾಡಬೇಕು ಎಂದುಕೊಂಡರು. ಈ ಕೊಠಡಿ ತೆರೆದಾಗ ಕೋಣೆಯಲ್ಲಿ ಮೂರು ಉಂಗುರಗಳ ಕಾಂಡಿಯಾಗಳು ಸಹ ಸಿಕ್ಕಿವೆ. 200 ಕ್ಕೂ ಹೆಚ್ಚು ಅಪರೂಪದ ಹಸ್ತಪ್ರತಿಗಳನ್ನು ಈ ಕಾಂಡಿಯಾಗಳಲ್ಲಿ ಇರಿಸಲಾಗಿತ್ತು. ಈ ಹಸ್ತಪ್ರತಿಗಳು ಎರಡು ಸೆಂ.ಮೀ ನಿಂದ 12 ಅಡಿ ಉದ್ದದ ಕಾಗದವನ್ನು ಹೊಂದಿವೆ. ಇದನ್ನು ನೋಡಿ ನಾವೆಲ್ಲರೂ ತುಂಬಾ ದಿಗ್ಭ್ರಾಂತರಾದೆವು ಎಂದು ಹೇಳಿಕೊಂಡಿದ್ದಾರೆ.

ಈ ಹಸ್ತಪ್ರತಿಗಳಲ್ಲಿ ಅತ್ಯಂತ ಪುರಾತನಾದದ್ದಾಗಿದ್ದು 1785 ರಲ್ಲಿ ಬರೆಯಲ್ಪಟ್ಟಿದೆ ಎಂದು ತಿಳಿಯಲಾಗಿದೆ, ಆದರೆ ಹಸ್ತಪ್ರತಿಗಳಲ್ಲಿ ಉಲ್ಲೇಖಿಸಿರುವ ಭಾಷೆಯನ್ನು ಇನ್ನೂ ಸ್ಪಷ್ಟವಾಗಿ ಓದಲು ಸಾಧ್ಯವಾಗಿಲ್ಲ. ಇನ್ನೂ ಹೆಚ್ಚಿನ ಐತಿಹಾಸಿಕ ವಸ್ತುಗಳು ಮನೆಯಲ್ಲಿ ಇವೆ ಎಂದು ಅವರು ಹೇಳಿದ್ದಾರೆ. ಈ ಅಪರೂಪದ ಪಾಂಡೂಲಿಪಿಗಳಿರುವ ಹಸ್ತಪ್ರತಿಗಳು ಇಲ್ಲಿ ದೊರೆತಿರುವುದು ಹೆಮ್ಮೆಯ ವಿಷಯವೇ ಸರಿ. ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಅದರ ಮೇಲೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ನಿಮ್ಮ ಸುತ್ತಮುತ್ತಲು ಈ ರೀತಿ ಘಟನೆ ನಡೆದಿದ್ದರೆ ಕಾಮೆಂಟ್ ಮಾಡಿ ತಿಳಿಸಿ.