Advertisements

ಕೇವಲ ಕ್ಷಣಿಕ ಸುಖಕ್ಕಾಗಿ ಈ ಹೆಂಗಸು ಎಂತಹ ನೀಚ ಕೆಲಸ ಮಾಡಿದ್ದಾಳೆ ಗೊತ್ತಾ? ಯಪ್ಪ ಈ ಮೂತಿಗೆ ಬಂಗಾರದಂತಹ ಗಂಡ ಬೇಕಿತ್ತಾ?!

Kannada News

ಸ್ನೇಹಿತರೇ, 2015ರ ಅಕ್ಟೋಬರ್ 14 ನೇ ತಾರೀಖಿನಂದು ಆಸ್ಟ್ರೇಲಿಯಾದಿಂದ ಭಾರತದ ಕೇರಳಕ್ಕೆ ಅಬ್ರಾಹಿಂ ಹಾಗೂ ನೀಲಮ್ಮ ಎಂಬ ದಂಪತಿಗೆ ಒಂದು ಕರೆ ಬರುತ್ತದೆ. ಆ ಕರೆಯಲ್ಲಿ ತಮ್ಮ ಮಗ ನಿಖಿಲ್ ಅಬ್ರಾಹಿಂ ಸಾವನ್ನಪ್ಪಿದ್ದಾನೆ ಎಂಬ ವಿಷಯ ತಿಳಿಸಲಾಗುತ್ತದೆ.

ಇಂತಹ ಕಠೋರವಾದ ಸುದ್ದಿಯನ್ನು ತಿಳಿಸಿದ್ದು ಬೇರೆ ಯಾರು ಅಲ್ಲ ಸ್ವತಹ ಅವರ ಸೊಸೆಯೇ ಹೌದು ಸೌಮ್ಯ ಎಂಬಾಕೆ ಈ ಸುದ್ದಿಯನ್ನು ನಿಖಿಲ್ ಅಬ್ರಾಹಿಂ ರವರ ಹೆತ್ತ ತಂದೆ ತಾಯಿಗೆ ತಿಳಿಸಿದ ಸಂದರ್ಭದಲ್ಲಿ ಆಕಾಶವೇ ತಲೆಯ ಮೇಲೆ ಬಿದ್ದಂತೆ ಭಾಸವಾಗುತ್ತದೆ.

ಕೇವಲ 33 ವರ್ಷದ ತನ್ನ ಮಗ ದಿಡೀರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ ಎಂಬ ವಿಷಯವನ್ನು ನುಂಗುವುದಕ್ಕೆ ಹೇಗೆ ತಾನೇ ಸಾಧ್ಯವಾಗುತ್ತದೆ ಹೇಳಿ? ಸೌಮ್ಯ ಮುಂಬೈನ ಪೊಲೀಸರಿಗೂ ಕೂಡ ಕರೆ ಮಾಡಿ ಈ ವಿಷಯವನ್ನು ತಿಳಿಸಿ ಅವರನ್ನು ಮನೆಗೆ ಕರೆಸಿಕೊಂಡಳು. ಅಲ್ಲದೆ ಶವದ ಮಹಜರು ಮಾಡಿಸಿದ ಮೇಲೆ ತನ್ನ ಪತಿಯ ಶವವನ್ನು ಹೊತ್ತು ವಿಮಾನದಿಂದ ಕೇರಳಕ್ಕೆ ಬರುತ್ತಾಳೆ.

ಇದಾದ ಬಳಿಕ ದುಬೈನಲ್ಲಿ ನಿಖಿಲ್ನ ಅದೊಪ್ಸಿ ವರದಿಗಳು ನೋಡಿದ ಪೊಲೀಸರು ಒಂದು ಕ್ಷಣ ಬೆಚ್ಚಿಬೀಳುತ್ತಾರೆ. ಹೌದು ನಿಖಿಲ್ ಹೃದಯಾಘಾತದ ಸಮಸ್ಯೆಯಿಂದ ಸತ್ತಿಲ್ಲ ಎಂಬುದು ಬಹಿರಂಗವಾಗುತ್ತದೆ. ನಿಖಿಲ್ ಸಾವಿನ ಕಾರಣವನ್ನು ಹುಡುಕುತ್ತ ಹೊರಟ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಹೌದು ಮದುವೆಯಾಗಿದ್ದರೂ ಕೂಡ ಸೌಮ್ಯ ತನ್ನ ಗೆಳೆಯ ಅರುಣ್ನೊಂದಿಗೆ ಸುತ್ತಾಟ, ಹೆಚ್ಚಿಗೆ ಸಮಯ ಕಳೆಯುವಂತಹ ಒಡನಾಟ ಎಲ್ಲವನ್ನೂ ಬೆಳೆಸಿಕೊಂಡಿದ್ದಳು.

ಇವರಿಬ್ಬರ ನಡುವೆ ಸ್ನೇಹ ಹಾಗೂ ಪ್ರೀತಿ ಎರಡು ರೀತಿಯಾದಂತಹ ರಿಲೇಷನ್ಶಿಪ್ ಸೃಷ್ಟಿಯಾಗಿತ್ತು. ಆತ್ತ ಆಕೆಯ ಕಾಲೇಜ್ ಸ್ನೇಹಿತ ಅರುಣ್ಗೂ ಕೂಡ ಮದುವೆಯಾಗಿ ಒಂದು ಗಂಡು ಮಗುವಿತ್ತು. ಹೀಗೆ ಆತನ ಜೊತೆ ಇನ್ನಷ್ಟು ಸಮಯ ಕಾಲ ಕಳೆಯಬೇಕು ಎಂದು ಬಯಸುತ್ತಿದ್ದ ಸೌಮ್ಯ ಆಸ್ಟ್ರೇಲಿಯಾದಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ತನ್ನ ಪತಿಗೆ ತಿಳಿಸಿ ಆಸ್ಟ್ರೇಲಿಯಾಗೆ ಹೋಗುವುದಾಗಿ ಹೇಳುತ್ತಾಳೆ. ಆದರೆ ಕೆಲಸದ ನಿಮಿತ್ತ ನಿಖಿಲ್ ನಾನು ಇನ್ನು ಒಂದು ತಿಂಗಳು ಕಳೆದು ದುಬೈನಿಂದ ಆಸ್ಟ್ರೇಲಿಯಾಗೆ ಬರುತ್ತೇನೆ ಎಂದು ಹೇಳಿರುತ್ತಾನೆ.

ಹೀಗೆ ಪತಿ ಇಲ್ಲದ ಕಾರಣ ತನ್ನ ಆತ್ಮೀಯ ಗೆಳೆಯ ಅರುಣ್ನೊಂದಿಗೆ ಏಕಾಂತವಾಗಿ ಆಗಾಗ ಒಂದೇ ರೂಮಿನಲ್ಲಿ ಸೌಮ್ಯ ಸಮಯ ಕಳೆಯುತ್ತಿರುತ್ತಾರೆ. ಹೀಗೆ ತಾವಿಬ್ಬರು ಮುಂದಿನ ಜೀವನದಲ್ಲಿಯೂ ಒಂದಾಗಿ ಇರಬೇಕೆಂದು ಭಾವಿಸಿ ಸೌಮ್ಯ ಅರುಣ್ ಜೊತೆ ಸೇರಿ ತನ್ನ ಪತಿ ನಿಖಿಲ್ ಅಬ್ರಾಹಿಂನನ್ನು ಕೊಲ್ಲಬೇಕು ಎಂಬ ನಿರ್ಧಾರ ಮಾಡಿ ಆತನ ಹತ್ಯೆ ಮಾಡುತ್ತಾರೆ ಹಾಗೂ ನನ್ನ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ಹೃದಯಘಾತ ಸಮಸ್ಯೆಯಿಂದ ಅಸುನೀಗಿದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಾರೆ.

ಅಲ್ಲಿನ ವಿಕ್ಟೋರಿಯಾ ಕೋರ್ಟ್ ವಂಚನೆ ಹತ್ಯೆಗೆ ಇಬ್ಬರಿಗೂ ಕೂಡ 25 ವರ್ಷದ ಸುದೀರ್ಘ ಅವಧಿಯ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ಈ ಘಟನೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.