Advertisements

ಈ ಮಹಿಳೆ ಮನೆಯಲ್ಲಿ ಹುಲಿಯನ್ನು ತಂದು ಸಾಕಿಕೊಂಡಳು! ಮುಂದೆ ನಡೆದಿದ್ದು ತಿಳಿದರೆ ಬೆಚ್ಚಿ ಬೀಳುತ್ತೀರ…!!!

Kannada News

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬೆಕ್ಕು, ನಾಯಿಗಳನ್ನು ಸಾಕಿಕೊಂಡು, ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಎಲ್ಲರೂ ಸಾಕು ಪ್ರಾಣಿಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ನಾವು ಈಗ ತಿಳಿಸುವ ಒಂದು ಕುಟುಂಬದವರು ಮಾತ್ರ ಸಾಕಿಕೊಂಡಿದ್ದೆ ಬೇರೆ ಪ್ರಾಣಿ. ಇಲ್ಲಿ ಒಂದು ಕುಟುಂಬ ಕಾಡುಪ್ರಾಣಿ ಆದ ಹುಲಿಯನ್ನು ಸಾಕಿ ಕೊನೆಗೆ ಏನಾಯ್ತು ಎಂದು ತಿಳಿದರೆ ನಿಮಗೂ ಕೂಡ ಬೇಸರವಾಗುತ್ತದೆ. ಏನಾಯ್ತು ಎಂಬುದನ್ನು ತಿಳಿಯೋಣ ಬನ್ನಿ.

Advertisements
Advertisements

ಲೀನಾ ಎಂಬ ದಂಪತಿಗಳಿಗೆ ಇರಿನಾ ಎಂಬ ಮಗಳಿದ್ದಳು. ಇವರು ಒಮ್ಮೆ ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಅಲ್ಲಿ ಹುಲಿಯೊಂದು 2ಮರಿಗಳಿಗೆ ಜನ್ಮ ನೀಡಿತ್ತು. ಆ ಹುಲಿ ಮರಿಗಳು ಬಹಳ ಮುದ್ದಾಗಿ ಕಾಣುತ್ತಿದ್ದವು. ಆ ಮರಿಗಳನ್ನು ನೋಡಿ ಇರೀನಾ ತನಗೆ ಆ ಮರಿ ಬೇಕೆಂದು ಹಠ ಹಿಡಿದಳು. ಪ್ರಾಣಿಸಂಗ್ರಹಾಲಯದ ಮ್ಯಾನೇಜರ್ ಗೆ ಹೆಚ್ಚು ಹಣವನ್ನು ನೀಡಿ ಮರಿಯನ್ನು ಮನೆಗೆ ತಂದು ಸಾಕಿಕೊಂಡರು. ಚಿಕ್ಕ ಮರಿಯಿದ್ದಾಗ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಲಿಮರಿ ದೊಡ್ಡಗಾದ ಮೇಲೆ ಕೇಜಿಗಟ್ಟಲೆ ಮಾಂಸವನ್ನು ತಿನ್ನಲು ಪ್ರಾರಂಭ ಮಾಡಿಕೊಂಡಿತು. ತಮ್ಮ ಅಕ್ಕಪಕ್ಕದ ಮನೆಯವರ ಮಕ್ಕಳೊಂದಿಗೆ ಮುದ್ದಾಗಿ ಆಟವಾಡುತ್ತಿತ್ತು. ದೊಡ್ಡದಾಗಿ ಬೆಳೆದರೂ ಕೂಡ ಚಿಕ್ಕ ಮನಸ್ಸಿರುವ ಹುಲಿಯು ರಾತ್ರಿಯ ವೇಳೆ ಗರ್ಜಿಸಿದಾಗ ಅಕ್ಕಪಕ್ಕದ ಮನೆಯವರು ಹೆದರಿಕೊಳ್ಳುತ್ತಿದ್ದರು.

ದಿನ ಕಳೆದಂತೆ ಹುಲಿ ಆಟ ಆಡುವ ವಿಡಿಯೋ ದೇಶದೆಲ್ಲೆಡೆ ವೈರಲ್ ಆಗುತ್ತಾ ಸಕತ್ ಫೇಮಸ್ ಆಯ್ತು. ಈ ಹುಲಿಯ ಹೆಸರು ರೂಲರ್ ಎಂದು. ಇಷ್ಟು ಫೇಮಸ್ ಆದ ರೂಲರ್ ಕೊನೆಗೆ ಸಿನಿಮಾಗಳಿಗೂ ಸೆಲೆಕ್ಟ್ ಆಗಿ ಸಿನಿಮಾಗಳಲ್ಲಿಯೂ ನಟಿಸಲು ಶುರುವಾಯಿತು. ಒಮ್ಮೆ ಸಿನಿಮಾದ ಶೂಟಿಂಗ್ ಗಾಗಿ ಶಾಲೆಯೊಂದರಲ್ಲಿ ರೂಲರ್ ಅನ್ನು ಕರೆತರಲಾಗಿತ್ತು. ಅಲ್ಲಿಯೇ ಪಾರ್ಕ್ ನಲ್ಲಿ ಕೂತಿದ್ದ ಲವ್ವರ್ಸ್ ಅನ್ನು ಕಂಡು ತಮ್ಮ ಮನೆಗೆ ಯಾರೇ ಬಂದರೂ ಸಹ ಮುದ್ದಾಡುತ್ತಿದ್ದ ಹುಲಿ, ಬಾಯಿ ಬಿಟ್ಟುಕೊಂಡು ಆ ಲವ್ವರ್ಸ್ ಅನ್ನು ಮುದ್ದಾಡಲು ಅವರೆಡೆ ಹೋದಾಗ, ಲವರ್ಸ್ ಆ ಹುಲಿಯನ್ನು ಕಂಡು ಹೆದರಿ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡರು.

ಅಲ್ಲೇ ಇದ್ದ ಪೋಲೀಸ್ ಹುಲಿಯನ್ನು ಗುಂಡಿಟ್ಟು ಕೊಲ್ಲುತ್ತಾರೆ. ಪ್ರೀತಿಯಿಂದ ಸಾಕಿದ ರೂಲರ್ ಅನ್ನು ಕಳೆದುಕೊಂಡ ಕುಟುಂಬದವರು ಬಹಳ ನೋವು ತಿಂದರು. ಎಷ್ಟು ದಿನ ಕಳೆದರೂ ಈ ವಿಚಾರದಿಂದ ಹೊರ ಬರಲು ಈ ಕುಟುಂಬದವರಿಗೆ ಸಾಧ್ಯವಾಗಲಿಲ್ಲ. ಹೌದು ಸ್ನೇಹಿತರೆ ಪ್ರೀತಿಯಿಂದ ಸಾಕಿಕೊಂಡ ಯಾವುದೇ ಪ್ರಾಣಿ ದೂರವಾದಾಗ ಅವರಿಗೆ ಆಗುವ ನೋವು ಮಾತಿನಲ್ಲಿ ಹೇಳಲು ಸಾಧ್ಯ ಆಗುವುದಿಲ್ಲ.