Advertisements

ತನ್ನ ಮದುವೆಯನ್ನೇ ಮರೆತು ಕೆಲಸದಲ್ಲಿ ಮುಳುಗಿದ ಮದುಮಗ..! ವರ್ಕ್ ಫ್ರಮ್ ಮ್ಯಾರೇಜ್ ಅಂತ ಹೊಸ ಟ್ರೆಂಡ್ ಸೆಟ್ ಮಾಡಿದ್ದಾನೆ… ನೀವೇ ನೋಡಿ..

Entertainment Kannada News

ನಮಸ್ತೆ ಸ್ನೇಹಿತರೆ, 2020 ವರೆಗೂ ವರ್ಕ್ ಫ್ರಮ್ ಹೋಂ ಎನ್ನುವುದು ಅನೇಕರಿಗೆ ಕನಸಾಗೇ ಉಳಿದಿತ್ತು. ಆದರೆ ಕೊರೋನ ಎಂಬ ಮಹಾಮಾರಿ ಅಪ್ಪಳಿಸಿ ಅನೇಕರ ವರ್ಕ್ ಫ್ರಮ್ ಹೋಮ್ ಕನಸನ್ನು ನನಸು ಮಾಡಿದೆ. ಮನೆಯ ಕೆಲಸಗಳನ್ನು ಮಾಡಿಕೊಂಡೆ ಕಚೇರಿ ಕೆಲಸಗಳನ್ನು ಮಾಡುವುದು ಸಾಮಾನ್ಯವಾಗಿದೆ. ಈಗ ವರ್ಕ್ ಫ್ರಮ್ ವೆಡ್ಡಿಂಗ್ ಎಂಬಂತೆ ಮದುವೆ ಮಂಟಪದಲ್ಲಿ ಲ್ಯಾಪ್ಟಾಪ್ ಹಿಡಿದು ಕೂತ ಮದುಮಗನ ಫೋಟೋ ವೈರಲ್ ಆಗಿದೆ..

Advertisements
Advertisements

ಹೌದು ಮದುಮಗ ತನ್ನ ಮದುವೆಯನ್ನೇ ಮರೆತು ತನ್ನ ಆಫೀಸ್ ಕೆಲಸವನ್ನು ಮಾಡಲು ಲ್ಯಾಪ್ ಟಾಪ್ ನ ಜೊತೆ ಕುಸ್ತಿ ಆಡುವುದನ್ನು ನಾವು ಫೋಟೋದಲ್ಲಿ ಗಮನಿಸಬಹುದು. ಇದನ್ನು ವಿಡಿಯೋ ಮಾಡಿ ಯಾರೋ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಅನೇಕರು ಕಾಮೆಂಟ್ಗಳನ್ನು ಮಾಡಿದ್ದಾರೆ. ಕೆಲವರು ಯಾವ ನಿವನು ಮೆಂಟಲ್ ಅಂದರೆ, ಇನ್ನು ಕೆಲವರು ಅಯ್ಯೋ ಪಾಪ ಇಂಥ ಕಷ್ಟ ಯಾರಿಗೂ ಬರಬಾರದು ಅಂದಿದ್ದಾರೆ. ಇನ್ನು ಕೆಲವರಾದರೆ ಇವನಿಗೆ ಮದುವೆಯನ್ನು ಎಂಜಾಯ್ ಮಾಡುವುದು ಸಹ ಗೊತ್ತಿಲ್ಲ ಅಂತ ಕಾಮೆಂಟ್ ಮಾಡಿದ್ದಾರೆ.

ಈ ಫೋಟೋದಲ್ಲಿ ಮದುಮಗಳು ಮದುಮಗನನ್ನು ನೋಡುತ್ತಾ ನಗುವುದನ್ನು ಕಾಣಬಹುದು. ಇದನ್ನು ಗಮನಿಸಿದರೆ ಮದುಮಗನಿಗೆ ತನ್ನ ಮದುವೆಗಿಂತ ತನ್ನ ಕೆಲಸವೇ ಹೆಚ್ಚು ಪ್ರಾಮುಖ್ಯ ಎಂದು ತಿಳಿದುಬರುತ್ತದೆ. ಆದರೆ ಈ ಮದುಮಗ ಮಾಡಿದ ಕೆಲಸವನ್ನು ಕೆಲವರು ಮೆಚ್ಚುತ್ತಾರೆ, ಕೆಲವರು ಟೀಕಿಸುತ್ತಾರೆ. ಆದರೆ ನಮ್ಮ ಭಾರತದ ಪದ್ಧತಿಗಳ ಪ್ರಕಾರ ಈತ ಮಾಡಿದ್ದು ನೂರಕ್ಕೆ ನೂರು ಪಾಲು ತಪ್ಪು ಅಂತ ಹೇಳಬಹುದು. ಈ ಮದುಮಗ ಮಾಡಿದ ಕೆಲಸ ಸರಿ ಇದಿಯಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.