Advertisements

ರಾಧಿಕಾಗಾಗಿ ಯಶ್ ಖರೀದಿ ಮಾಡಿರುವ ಮನೆ ಹೇಗಿದೆ ಗೊತ್ತಾ.? ಮನೆಯ ವೆಚ್ಚ ಕೇಳಿದರೆ ಗ್ಯಾರಂಟಿ ಶಾ’ಕ್.

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್‌ವುಡ್‌ನ ಸುಂದರ ಜೋಡಿಗಳಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ರಾಧಿಕಾ ಮನೆ ಮೆಚ್ಚಿದ ಕರುನಾಡ ಮಗಳಾದ್ರೆ ಯಶ್ ಜಗ ಮೆಚ್ಚಿದ ಭಾರತದ ಹೀರೋ. ಈ ಇಬ್ಬರು ಒಬ್ಬರನ್ನೊಬ್ಬರನ್ನು ಇಷ್ಟಪಟ್ಟು ಪ್ರೀತಿಯಿಂದ ವಿವಾಹವಾಗಿದ್ದು ನಿಮಗೆಲ್ಲಾ ತಿಳಿದೇ ಇದೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಪ್ರೀತಿ ಪ್ರೇಮ ಇವತ್ತು ನಿನ್ನೆಯ ಕಥೆಯಲ್ಲ ಅದು ವರುಷಗಳ ಹಿಂದಿನ ಬಾಂಧವ್ಯ. ನಂದಗೋಕುಲ ಧಾರವಾಹಿಯಲ್ಲಿ ಇಬ್ಬರು ಜೊತೆಯಾಗಿ ನಟಿಸಿ ಸೀರಿಯಲ್ ಅಭಿಮಾನಿಗಳ ಫೆವರೆಟ್ ಕ’ಪಲ್ ಆದ್ರು. ನಂತರದ ದಿನಗಳಲ್ಲಿ ಅನೀರಿಕ್ಷಿತವಾಗಿ ಸಿನಿಮಾಗಳಲ್ಲಿ ಇಬ್ಬರು ಜೊತೆಯಾಗಿ ನಟಿಸಿದ್ರು. ಇನ್ನು ಈ ರಾಕಿಂಗ್ ಕಪಲ್ಸ್ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಮೊಗ್ಗಿನ ಮನಸ್ಸು ಭರ್ಜರಿ ಹಿಟ್ ಆಯಿತು.

Advertisements
Advertisements

ನಂತರ ಒಳ್ಳೆಯ ನೇಮ್ ಫೇಮ್ ಎರಡು ಬಂತು. ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರು ಒಂದೊಂದೆ ಸಿನಿಮಾಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ರು. ಹಾಗೆಯೇ ರಾಧಿಕಾ ಪಂಡಿತ್ ಅವರು ಸಹ ತಮ್ಮ ಅಮೋಘ ಅಭಿನಯದ ಮೂಲಕ ಗಾಂಧಿನಗರದಲ್ಲಿ ಉತ್ತಮ ನಟಿ ಎಂಬ ಹೆಸರನ್ನು ಪಡೆದರು. ಹೀಗೆ ಈ ಕಪಲ್ಸ್ ಮಾಡಿದ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿ ದಶಕದ ಹೆಮ್ಮೆಯ ನಾಯಕ ನಾಯಕಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರಿಬ್ಬರ ಮಧ್ಯೆ ಅಗಾದವಾಗಿ ಸ್ನೇಹವಿತ್ತು. ಮುಂದಿನ ದಿನಗಳಲ್ಲಿ ಈ ಸ್ನೇಹವೇ ಪ್ರೀತಿಯಾಗಿ ಬದಲಾಯಿತು. ಆ ಪ್ರೀತಿ ವಿವಾಹ ಮಾಡಿಕೊಳ್ಳುವಷ್ಟರಮಟ್ಟಿಗೆ ಬಂತು. ಸದ್ಯ ಈಗ ವಿವಾಹವಾಗಿ ದಾಂಪತ್ಯ ಜೀವನದ ಪ್ರತೀಕ ಎಂಬಂತೆ ರಾಕಿಂಗ್ ದಂಪತಿಗಳಿಗೆ ಒಂದು ಹೆಣ್ಣು, ಹಾಗೂ ಒಂದು ಗಂಡು ಮಗುವಿದೆ.

ಯಶ್ ಅವರು ಕೆಜಿಎಫ್ ಸಿನಿಮಾ ನಂತರದಲ್ಲಿ ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗೆಯೇ ಇವರ ಮಾರ್ಕೆಟ್ ಕೂಡ ದಿನಕಳೆದಂತೆ ಗಗನಕ್ಕೇರುತ್ತಿದೆ. ಯಶ್ ತಮ್ಮ ಹೆಂಡತಿ ಹಾಗೂ ಮಕ್ಕಳಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದರಿದ್ದಾರೆ. ಅಷ್ಟೊಂದು ಆಸೆ, ಪ್ರೀತಿ, ಮಮತೆ ಅವರಿಗೆ ಅವರ ಮಕ್ಕಳು ಹಾಗೂ ರಾಧಿಕಾ ಮೇಲಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಈಗ ಆಸಕ್ತಿದಾಯಕ ವಿಷಯ ಅಂದ್ರೆ, ಯಶ್ ತಮ್ಮ ಹೆಂಡತಿಗೋಸ್ಕರ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ.

ಅ ಮನೆಯ ಮೌಲ್ಯ ಎಷ್ಟು ಗೊತ್ತಾ.? ಕೇಳಿದರೆ ಶಾ’ಕ್ ಆಗ್ತೀರಾ. ಹೌದು ರಾಕಿಂಗ್ ಸ್ಟಾರ್ ಯಶ್ ತಮ್ಮ ಮಡದಿ ಹಾಗೂ ಮಕ್ಕಳಿಗಾಗಿ ಬರೋಬ್ಬರಿ 20ಕೋಟಿ ಮೌಲ್ಯದ ಎರಡು ಫ್ಲಾಟ್‌ಗಳನ್ನು ಖರೀದಿ ಮಾಡಿದ್ದಾರೆ. ಇನ್ನು ಈ ಫ್ಲಾಟ್ ಬೆಂಗಳೂರಿನ ಹೃದಯಭಾಗವಾದ ಗಲ್ಫ್ ಕ್ಲಬ್ ಬಳಿಯಿರುವ ಒಂದು ಅಪಾರ್ಟ್ಮೆಂಟ್ ಬಳಿಯಿದೆ. ಇನ್ನು ಈ ಅಪಾರ್ಟ್ಮೆಂಟ್ ವಿಧಾನಸೌಧದ ಹಿಂಭಾಗದಲ್ಲಿದ್ದು, ಏರ್‌ಪೋರ್ಟ್ಗೂ ಸಹ ಹತ್ತಿರವಾಗಿದೆ. 20 ಕೋಟಿಯ ಎರಡು ಫ್ಲಾಟ್‌ಗಳನ್ನು ಎಲ್ಲ ರೀತಿಯಲ್ಲಿ ಆಲೋಚನೆ ಮಾಡಿ ಯಶ್ ಖರೀದಿಸಿದ್ದಾರೆ. ತನ್ನ ಸಂಸಾರಕ್ಕಾಗಿ ಯಶ್ ಈ ಫ್ಲಾಟ್ ಖರೀದಿಸಿದ್ದು, ಯಶ್ ಒಬ್ಬ ಪರ್ಫೆಕ್ಟ್ ಫ್ಯಾಮಿಲಿಮೆನ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಮಾಚಾರಿ ದಂಪತಿಗಳ ಪ್ರೇಮದ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟಪಡ್ತೀರಾ.. ಕಮೆಂಟ್ ಮಾಡಿ ತಿಳಿಸಿ