Advertisements

ಐಷರಾಮಿ ಹೋಟೆಲ್ ನಲ್ಲಿ ಮಗಳ ಹುಟ್ಟು ಹಬ್ಬ ಮಾಡಿದ ಯಶ್ ದಂಪತಿ! ನೋಡಿ..

Kannada News

ನಮಸ್ಕಾರ ಸ್ನೇಹಿತರೆ ದೊಡ್ಡ ದೊಡ್ಡ ಸಿನಿಮಾ ಹಿರೋಗಳ ಕಟೌಟ್ ಗಳನ್ನು‌ ನೋಡುತ್ತಾ, ನಾನು ಒಂದಿನ ಸ್ಟಾರ್ ನಟ ಆಗೇ ಆಗ್ತಿನಿ ಅಂತ ಆಕಾಶದೇತ್ತರ ಕನಸ್ಸು ಕಟ್ಟಿಕೊಂಡ ನಟ ಇವರು. ಒಬ್ಬರೇ ಹಗಲಿರುಳು ಅವಕಾಶಗಳಿಗಾಗಿ ಕಾದು, ಸಿಕ್ಕ ಅವಕಾಶದಲ್ಲಿ ನಟಿಸಿ, ನಂತರ ಒಂದೊಂದಾಗಿ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕ ಕನ್ನಡ ಅಭಿಮಾನಿಗಳಿಂದ ರಾಕಿ ಬಾಯ್,ರಾಕಿಂಗ್ ಸ್ಟಾರ್ ಯಶ್ ಎಂದು ಫೇಮಸ್ ಆದ ನಟ ಯಶ್.

ಮೊಗ್ಗಿನ ಮನಸ್ಸು ಚಿತ್ರದಲ್ಲಿ ಮೊದಲ ಬಾರಿಗೆ ನಟನಾಗಿ ಕಾಣಿಸಿಕೊಂಡು ನಂತರ ಹಲವು ಚಿತ್ರದಲ್ಲಿ ಅಭಿನಯಿಸಿ, ಇಷ್ಟ ಪಟ್ಟು ರಾಧಿಕಾ ಪಂಡಿತ್ ಅವರ ಕೈಹಿಡಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖವಾಗಿ ಜೀವನ ಸಾಗಿಸುತ್ತಿರುವ ಸ್ಟಾರ್ ಕುಟುಂಬ ಅವರದ್ದು.

ಯಶ್ ಮೊದಲಿನಿಂದಲೂ ಸಿನಿಮಾ ಸಮಯ ಬಿಟ್ಟರೆ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡ್ತಾರೆ. ಮದುವೆಯ ನಂತರ ಎರೆಡು ಮುದ್ದಾದ ಮಕ್ಕಳ ತಂದೆಯಾದ ಯಶ್ ಅವರಿಗೆ ಅಭಿಮಾನಿಗಳ ಬಳಗ ದೊಡ್ಡಾಗುತ್ತಾ ಹೋಗುತ್ತಿದೆ. ಇನ್ನು ತಾವು ಎಷ್ಟೇ ಬ್ಯುಸಿಯಾಗಿದ್ದರು ಸಹ ಕುಟುಂಬದ ಕಾರ್ಯಕ್ರಮದಲ್ಲಿ ತಪ್ಪದೆ ಭಾಗಿಯಾಗುತ್ತಾರೆ.

ಇನ್ನು ಯಶ್ ರಾಧಿಕಾ ವಯಕ್ತಿಕ ಬದುಕು ಸಹ ಅಷ್ಟೆ ಅದ್ಭುತವಾಗಿದೆ. ಸಿರಿಯಲ್ ಇಂದ ತಮ್ಮ ಕರಿಯರ್ ಪ್ರಾರಂಭಿಸಿದ ಯಶ್ ರಾಧಿಕಾ ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದಾರೆ. ಮೊಗ್ಗಿನ ಮನಸ್ಸು, ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ, ಡ್ರಾಮಾ ಹಲವು ಹಿಟ್ ಸಿನಿಮಾ ಕೊಟ್ಟಿದ್ದರು.

ಅವರ ಒಂದೆ ಚಿತ್ರದಲ್ಲಿ ಕೆಲಸ ಮಾಡುತ್ತಾ ಸ್ನೇಹ ಗಾಢವಾಗಿ ಬೆಳೆದು ಅದು ಪ್ರೀತಿಯಾಗಿ ಮಾಡುವುದರಲ್ಲಿ ನಾಲ್ಕು ವರ್ಷಗಳು ಕಳೆದು ಹೋಗಿದ್ದವು. 2016 ರಲ್ಲಿ ರಾಧಿಕಾ ಹಾಗೂ ಯಶ್ ಎರಡು ಕುಟುಂಬದ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡರು. 2018 ರಲ್ಲಿ ಐರಾ ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದರು ನಟಿ ರಾಧಿಕಾ ಪಂಡಿತ್.

ಐರಾ ನಂತರ ಅಥರ್ವ ಎಂಬ ಮುದ್ದಾದ ಗಂಡು ಮಗ ಸಹ ಈ ಸ್ಟಾರ್ ಕುಟುಂಬದಲ್ಲಿ ಪಾದಾರ್ಪಣೆ ಮಾಡಿತ್ತು. ಇನ್ನು ಆಗಾಗ ರಾಕಿ ಬಾಯ್ ಮಕ್ಕಳ ಜೊತೆ ಆಟ, ಡ್ಯಾನ್ಸ್, ಫೋಟೊಗಳಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಸಹ ಆಗಿಬಿಟ್ಟಿದ್ದಾರೆ.

ಇನ್ನು ರಾಧಿಕಾ ಪಂಡಿತ್ ಮದುವೆಯ ನಂತರ ನಟನೆಗೆ ಸದ್ಯಕ್ಕೆ ವಿರಾಮ ‌ಹೇಳಿದ್ದಾರೆ.ಇಡೀ ದಿನವು ಮಕ್ಕಳ ಆರೈಕೆ, ಅವರ ಜೊತೆಗೆ ‌ಕಾಲ‌ ಕಳೆಯುತ್ತಾರೆ. ಅದಷ್ಟೆ ಅಲ್ಲದೆ ಯಶ್ ಅವರೊಂದಿಗೆ ಸದಾ ಜೊತೆಯಾಗಿರುತ್ತಾ ಅವರ ಸಮಸ್ಯೆಯಾಗಲಿ, ಸಂತಸವಾಗಲಿ ರಾಧಿಕಾ ಯಾವಾಗಲು ಜೊತೆಯಾಗಿ ಕಾಣಸಿಕೊಳ್ಳುತ್ತಾರೆ.

ಇದೀಗ ಈ ದಂಪತಿಗಳ ಮಗಳಾದ ಐರಾ ನಾಲ್ಕು ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾಳೆ. ಇನ್ನು ಈ ಸಮಾರಂಭದಲ್ಲಿ ಕಲಾವಿದರು, ಅವರ ಕುಟುಂಬಸ್ಥರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. ಪಿಂಕ್ ಬಣ್ಣದ ಮ್ಯಾಚಿಂಗ್ ಬಟ್ಟೆಗಳನ್ನು ಐರಾ ಹಾಗೂ ಅಥರ್ವ ತೊಟ್ಟಿದ್ದರೆ, ಯಶ್ ಹಾಗು ರಾಧಿಕಾ ನೀಲಿ ಬಣ್ಣದ ಬಟ್ಟೆ ತೊಟ್ಟು ಫರ್ಪೇಕ್ಟ್ ಫ್ಯಾಮಿಲಿ ಮಾಡಿಕೊಂಡಿದ್ದಾರೆ.

ಇವರ ಕಟುಂಬದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಐರಾಳ ಹುಟ್ಟು ಹಬ್ಬಕ್ಕೆ ಶುಭಾಷಶಗಳನ್ನು ನೀಡಿದ್ದಾರೆ. ಇದೇ ಸಮಯದಲ್ಲಿ ಯಶ್ ತಮ್ಮ ಮಗಳಾದ ಐರಾಳ ಹೆಸರಿನಲ್ಲಿ ಪ್ರೊಡಕ್ಷನ್ಸ್ ಹೌಸ್ ಸ್ಟಾರ್ಟ್ ಮಾಡಲಿದ್ದಾರೆ ಎಂಬ ಸುದ್ದಿ ಸಹ ಕೇಳಿ ಬಂದಿದ್ದು, ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.