Advertisements

ಯಶ್, ಸುದೀಪ್, ದರ್ಶನ್ ಒಟ್ಟಿಗೆ ರವಿಚಂದ್ರನ್ ಮಗನ ಮದುವೆಯಲ್ಲಿ! ನೋಡಿ..

Kannada News

ಪ್ರಿಯ ಓದುಗರೆ ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ಎಂದೇ ಹೆಸರಾದ ರವಿಚಂದ್ರನ್ ಅವರು ಇದೀಗ ಮಗನ ಮದುವೆಯ ಸಂಭ್ರಮದಲ್ಲಿ ಇದ್ದಾರೆ. ಆಡಂಬರವಿಲ್ಲದೆ ತಕ್ಕಮಟ್ಟಿಗೆ ಮಗನ ವಿವಾಹ ಮಾಡಿದ್ದಾರೆ. ಹಿಂದೆ ಮಗಳ ವಿವಾಹವನ್ನು ಅತಿ ವಿಜ್ರಂಭಣೆಯಿಂದ ಮಾಡಿದ್ದರು. ಇದೀಗ ತುಸು ಸಿಂಪಲ್ಲಾಗಿ ಮಗ ಮನೋರಂಜನ್ ಅವರ ವಿವಾಹವನ್ನು ಸಂಗೀತರೊಡನೆ ಮಾಡಿ ಮುಗಿಸಿದ್ದಾರೆ. ಈ ಮೊದಲು ಮನೋರಂಜನೆಗಾಗಿ ತಂದೆ ರವಿಚಂದ್ರನ್ ಅವರು ಹೊಸ ಸಿನಿಮಾವನ್ನು ತೆರೆಮೇಲೆ ತರಲು ಪ್ರಯತ್ನಿಸಿದ್ದರು. ಇದಕ್ಕಾಗಿ ಅವರು ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡಿದರು. ಇತ್ತೀಚೆಗೆ ಆ ಸಿನಿಮಾದ ಬಗ್ಗೆ ಯಾವುದೇ ಸುಳಿವು ಕೂಡ ಇಲ್ಲ. ಹಾಗಾದರೆ ಆ ಸಿನಿಮಾ ಏನಾಯಿತು? ಅಷ್ಟಕ್ಕೂ ಆ ಸಿನಿಮಾ ಸೆಟ್ಟೇರಲು ಓಟು ಖರ್ಚಾಗಿದ್ದು ಎಷ್ಟು ಕೋಟಿ ಗೊತ್ತಾ? ಅದೆಷ್ಟು ಅಂತಾ ನೋಡೋಣ ಬನ್ನಿ.

Advertisements
Advertisements


ರವಿಚಂದ್ರನ್ ಅವರು ತಮ್ಮ ಮಕ್ಕಳಿಬ್ಬರನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆಗೊಳಿಸುವ ಆಸೆ ಹೊಂದಿದವರು. ಅದಕ್ಕಾಗಿ ಮಕ್ಕಳಿಬ್ಬರಿಗೆ ಡಾನ್ಸ್ ಆಕ್ಟಿಂಗ್ ಫೈಟಿಂಗ್ ತೆರೆಮೇಲೆ ನಟಿಸಲು ಬೇಕಾದ ಎಲ್ಲಾ ಅರ್ಹತೆಗಳನ್ನು ಗಳಿಸಿಕೊಳ್ಳಲು ಮಕ್ಕಳಿಗೆ ತಿಳಿಸಿದರು. ನಂತರ ಅವರು ಆರ್ಥಿಕವಾಗಿ, ದೃಢವಾಗಿ ತಮ್ಮ ಕಾಲ ಮೇಲೆ ತಾವು ನಿಂತ ಮೇಲೆ ಅವರಿಗೆ ಮದುವೆಯನ್ನು ಮಾಡುವುದಾಗಿ ನಿರ್ಧರಿಸಿದ್ದರು. ಅದರಂತೆ ಮನೋರಂಜನ್ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರು. ಇದಾದ ನಂತರ ತಂದೆ-ತಾಯಿ ನೋಡಿದ ಹುಡುಗಿಯನ್ನು ಮನೋರಂಜನ್ ಅವರು ಒಪ್ಪಿ ಅವರ ಆಸೆಯಂತೆ ವಿವಾಹವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪತ್ನಿ ಸಂಗೀತ ವೈದ್ಯಕೀಯ ಹಿನ್ನೆಲೆಯನ್ನು ಹೊಂದಿದ್ದು ಇವರು ರವಿಚಂದ್ರನ್ ಅವರ ದೂರದ ಸಂಬಂಧಿ ಎನ್ನಲಾಗಿದೆ. ರವಿಚಂದ್ರನ್ ಅವರು ಯಾವುದೇ ಕಾರ್ಯಕ್ರಮ ಮಾಡಿದರೂ ಅದನ್ನು ಅದ್ದೂರಿಯಾಗಿ, ವಿಶಿಷ್ಟವಾಗಿ ಅದನ್ನೂ ಹೊರ ಜಗತ್ತಿಗೆ ತೋರ್ಪಡಿಸುವುದು ಒಂದು ವಿಶೇಷ ಗುಣವಿದೆ.

ಅಷ್ಟೇ ಅಲ್ಲ ಅದಕ್ಕೆ ಹಣವನ್ನು ನೀರಿನಂತೆ ಖರ್ಚು ಮಾಡುವುದು ಕೂಡ ರವಿಚಂದ್ರನ್ ಅವರು ಮಾತ್ರ. ಹೌದು ಓದುಗರೆ ರವಿಚಂದ್ರನ್ ಅವರ ಮಕ್ಕಳ ಮದುವೆಯನ್ನು ನೀವು ನೋಡಿದ್ದೀರಿ. ಅವುಗಳಿಗೆ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ಹಾಗೆ ಗಂಡುಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಕರೆತರಲು ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದರು. ಅದೆಷ್ಟರ ಮಟ್ಟಿಗೆ ಎಂದರೆ ಈ ಒಂದು ಸಿನಿಮಾದ ಸೆಟ್ಗೆ ಕರ್ಚು ಮಾಡಿದ ಹಣದಲ್ಲಿ ಎರಡರಿಂದ ಮೂರು ಸಿನಿಮಾಗಳನ್ನು ಮಾಡಬಹುದಿತ್ತು. ಅಷ್ಟೊಂದು ದುಬಾರಿಯಾದ ಸೆಟ್ಟನ್ನು ಈ ಸಿನಿಮಾಗೆ ಹಾಕಲಾಗಿತ್ತು. ಈ ವಿಚಾರ ಆದಷ್ಟು ಜನರಿಗೆ ಗೊತ್ತೇ ಇಲ್ಲ. ಹಿರಿಯ ಮಗ ಮನೋರಂಜನ್ ನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿ, ಅಲ್ಲಿಯೇ ಗಟ್ಟಿಗೊಳಿಸುವುದಕ್ಕಾಗಿ ತಂದೆ ರವಿಚಂದ್ರನ್ ಅವರು ಮಗನಿಗಾಗಿ ಸಿನಿಮಾ ಒಂದಕ್ಕೆ ಕೋಟಿ ಕೋಟಿ ಹಣವನ್ನು ಸುರಿದಿದ್ದರು.

ಆ ಸಿನಿಮಾದ ಹೆಸರು ” ರಣಧೀರ ಪ್ರೇಮಲೋಕದಲ್ಲಿ “. ಈ ಸಿನಿಮಾದ ಸೆಟ್ ಗಾಗಿ 12 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿತ್ತು. ಹೌದು ಸಿನಿಮಾ ಮುಹೂರ್ತಕ್ಕೆಂದೇ ಅರಮನೆಯ ಮೈದಾನದಲ್ಲಿ ಆಡಂಬರದ ಸೆಟ್ಟನ್ನು ಹಾಕಲಾಗಿತ್ತು. ಇಡೀ ಇಂಡಸ್ಟ್ರಿಯ ಎಲ್ಲಾ ಗಣ್ಯರನ್ನು ಹಾಗೂ ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿತ್ತು. ಸಿನಿಮಾದ ಪೋಸ್ಟರ್ ಕೂಡ ಹಾಕಲಾಗಿತ್ತು. ಇಡೀ ಸಿನಿಮಾದ ತಾರಾಗಣವೇ ಈ ಅರಮನೆಯ ಮೈದಾನದಲ್ಲಿ ಇತ್ತು. ಅಷ್ಟರಮಟ್ಟಿಗೆ ಈ ಸಿನಿಮಾ ಮುಹೂರ್ತದ ಸಂಭ್ರಮ ಅದ್ದೂರಿಯಾಗಿತ್ತು. ಎಲ್ಲರೂ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರ ಚಿತ್ರ ಬೇಗನೇ ತೆರೆಮೇಲೆ ಕಾಣಲಿ ಎಂದು ಆಶೀರ್ವಾದ ಮಾಡಿದರು. ಆದ್ರೆ, ದುರದೃಷ್ಟ ಎಂಬಂತೆ ಈ ಚಿತ್ರ ಸರಿಯಾಗಿ ಟೇಕಾಫ್ ಆಗಲಿಲ್ಲ. ಬದಲಾಗಿ ಸಿನಿಮಾ ಅಲ್ಲಿಗೇ ನಿಂತುಹೋಯಿತು.

ಅಂದು ನಿಂತುಹೋದ ಸಿನಿಮಾ ಇಂದಿಗೂ ಕೂಡ ಸೆಟ್ಟೇರಲಿಲ್ಲ. ಅದನ್ನು ಅಲ್ಲಿಗೆ ಕೈಬಿಟ್ಟ ರವಿಚಂದ್ರನ್ ಕುಟುಂಬ ಬೇರೆ ಬ್ಯಾನರ್ ನ ಮೂಲಕ, 2017ರಲ್ಲಿ ‘ಸಾಹೇಬ’ ಎನ್ನುವ ಚಿತ್ರದ ಮೂಲಕ ತಮ್ಮ ಮಗನನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕರೆತಂದರು. ನಂತರ ‘ಬೃಹಸ್ಪತಿ’, ‘ಮುಗಿಲುಪೇಟ’, ‘ಪ್ರಾರಂಭ’ ಎನ್ನುವ ಚಿತ್ರಗಳು ತೆರೆಮೇಲೆ ಬಂದವು. ಆದ್ರೆ, ತಕ್ಕಮಟ್ಟಿಗೆ ಹೆಸರು ಮಾಡಲಿಲ್ಲ. ಹಾಗೆ ಕಿರಿಯ ಪುತ್ರನನ್ನು’ ಕ್ರೇಜಿಸ್ಟಾರ್’ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಡೆಬ್ಯೂ ಮಾಡಿದರು. ಇದು ತಕ್ಕಮಟ್ಟಿಗೆ ಹೆಸರನ್ನು ಗಳಿಸಿದೆ. ನಂತರ ತ್ರಿವಿಕ್ರಮ ಚಿತ್ರ ಇವರನ್ನು ಗುರುತಿಸುವಂತೆ ಮಾಡಿತ್ತು. ಹೀಗೆ ಮಕ್ಕಳಿಬ್ಬರ ಭವಿಷ್ಯಕ್ಕಾಗಿ ನಟ ರವಿಚಂದ್ರನ್ ಅವರು ಕೋಟಿ ಕೋಟಿ ರೂಪಾಯಿಯನ್ನು ನೀರಿನಂತೆ ಖರ್ಚು ಮಾಡಿದ್ದಾರೆ.