Advertisements

ಯೋಗಿ ಸರ್ಕಾರ ‘ಝಾನ್ಸಿ’ ರೇಲ್ವೇ ಸ್ಟೇಷನ್ ಹೆಸರನ್ನು ಬದಲಾಯಿಸಲು ಮುಂದಾಗಿದ್ದಾರೆ..! ಹೊಸ ಹೆಸರು ಏನು ಅಂತ ತಿಳಿದರೆ ಕುಣಿದು ಕುಪ್ಪಳಿಸುತ್ತೀರ..

Kannada News

ನಮಸ್ತೆ ಸ್ನೇಹಿತರೆ, ಉತ್ತರಪ್ರದೇಶದ ಯೋಗಿ ಸರ್ಕಾರದ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು ಬದಲಾವಣೆಯನ್ನು ಬಯಸುವವರಿಗೆ ತುಂಬಾ ಇಷ್ಟವಾಗುತ್ತದೆ. ಯೋಗಿ ಸರ್ಕಾರವು ದರೋ’ಡೆಕೋ’ರರ ಹೆಸರುಗಳನ್ನು ತೆಗೆದು ಹಾಕಿ ಭಾರತೀಯ ಸಂಸ್ಕೃತಿಯ ಅಕ್ಷರಗಳನ್ನು ಮರುನಾಮಕರಣ ಮಾಡುತ್ತಿದ್ದಾರೆ. ಯೋಗಿ ಸರ್ಕಾರವು ಮೊಗಲಸರಾಯಿ ರೇಲ್ವೇ ಸ್ಟೇಷನ್ ಹೆಸರನ್ನ ಪಂಡಿತ್ ದೀನದಯಾಳ್ ಉಪಾಧ್ಯಾಯ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು, ಅದು ಕೇಂದ್ರದ ಅನುಮೋದನೆಯನ್ನೂ ಪಡೆಯಿತು. ಇದರೊಂದಿಗೆ ಫೈಜಾಬಾದ್ ರೈಲ್ವೇ ನಿಲ್ದಾಣದ ಹೆಸರನ್ನೂ ಅಯೋಧ್ಯೆ ಎಂದು ಮತ್ತು ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಯಿತು. ಈಗ ಈ ಸಂಚಿಕೆಯಲ್ಲಿ, ಉತ್ತರಪ್ರದೇಶದ ಆದಿತ್ಯನಾಥ್ ಸರ್ಕಾರವು ಝಾನ್ಸಿ ರೈಲ್ವೆ ಸ್ಟೇಷನ್ ಹೆಸರನ್ನು ಬದಲಾಯಿಸುವ ಯೋಜನೆಯನ್ನು ಸಿದ್ಧಪಡಿಸಿದೆ. ಈ ಸ್ಟೇಷನ್ ಹೊಸ ಹೆಸರು ಏನು ಗೊತ್ತಾ..? ತಿಳಿದರೆ ಕುಣಿದು ಕುಪ್ಪಳಿಸುತ್ತೀರ..

Advertisements
Advertisements

ಈ ಬಗ್ಗೆ ಉತ್ತರಪ್ರದೇಶ ಸರ್ಕಾರವು ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಮಾಹಿತಿ ನೀಡಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಉತ್ತರ ಪ್ರದೇಶ ಸರ್ಕಾರವು ಝಾನ್ಸಿ ರೇಲ್ವೇ ಸ್ಟೇಷನ್ ಹೆಸರನ್ನು ‘ವೀರಾಂಗಣ ಲಕ್ಷ್ಮಿಬಾಯಿ ರೈಲ್ವೇ ಸ್ಟೆಷನ್’ ಎಂದು ಬದಲಿಸಲು ಪ್ರಸ್ತಾವನೆ ಕಳುಹಿಸಿದೆ ಎಂದು ಹೇಳಿದರು. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಬಗ್ಗೆ ಮಾಹಿತಿ ನೀಡುತ್ತ, ಈ ವಿಷಯದ ಕುರಿತು ಗೃಹ ಸಚಿವಾಲಯವು ಸರ್ಕಾರದ ಸಂಬಂಧಿತ ಏಜೆನ್ಸಿಗಳ ಅಭಿಪ್ರಾಯವನ್ನು ಕೇಳಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಾತನಾಡುತ್ತ ಈ ವಿಷಯದಲ್ಲಿ ಸಂಬಂಧಪಟ್ಟ ಏಜೆನ್ಸಿಗಳ ಅಭಿಪ್ರಾಯ ಪಡೆದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಕುರಿತು, ಲೋಕಸಭಾ ಸಂಸದ ಅನುರಾಗ್ ಶರ್ಮಾ ಸಂಸತ್ತಿನಲ್ಲಿ ಸರ್ಕಾರದಿಂದ ಉತ್ತರ ಕೇಳಿದ್ದರು, ನಂತರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಮ್ಮ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.