Advertisements

ಅಮೇಜಾನ್ ನಲ್ಲಿ ಆ’ರ್ಡರ್ ಮಾಡಿದ್ದು ಪವರ್ ಬ್ಯಾಂಕ್..ಆದ್ರೆ ಆತನಿಗೆ ಬಂದ್ದಿದ್ದು ಮಾತ್ರ ಬೇರೆ.! ಅದನ್ನು ನೋಡಿದ ಆತ ಮಾತ್ರ…!

Inspiration

ನಮಸ್ತೆ ಸ್ನೇಹಿತರೆ, ಟೆಕ್ನಾಲಜಿ ಮುಂದುವರಿದಂತೆ ನಮ್ಮ ಮುಂದೆ ಆಯ್ಕೆಗಳು ಸಹ ಹೆಚ್ಚಾಗುತ್ತಾ ಸಾಗುತ್ತದೆ. ಈಗ ನಮ್ಮ ಬಳಿ ಒಂದು ಸ್ಮಾರ್ಟ್ ಮೊಬೈಲ್ ಇದ್ದರೆ ಸಾಕು ಕುಳಿತ ಜಾಗದಿಂದಲೇ ಆನ್ಲೈನ್ ನಲ್ಲಿ ಏನನ್ನು ಬೇಕಾದರೂ ಮನೆಗೆ ತರಿಸಿಕೊಳ್ಳಬಹುದಾಗಿದೆ. ಆದರೆ ಆನ್ಲೈನ್ ನಲ್ಲಿ ವಸ್ತುಗಳನ್ನು ಕೊಳ್ಳುವಾಗ ನಾವು ಎಷ್ಟೇ ಜಾಗರೂಕರಾಗಿದ್ದರು ಮೋ’ಸಕ್ಕೆ ಬ’ಲಿಯಾಗಿ ಹಣ ಕಳೆದುಕೊಂಡವರನ್ನು ನೋಡಿದ್ದೇವೆ. ನಾವು ಖರೀದಿ ಮಾಡಿದ ವಸ್ತು ಒಂದಾದರೆ ಕೆಲವೊಂದು ಬಾರಿ ನಮಗೆ ಬಂದು ತಲುಪುವ ವಸ್ತು ಬೇರೆಯದ್ದೇ ಆಗಿಬಿಟ್ಟಿರುತ್ತದೆ. ಒಂದು ವೇಳೆ ಆ ವಸ್ತು ನಾವು ಖರೀದಿ ಮಾಡಿದ ವಸ್ತುಗಿಂತ ದುಬಾರಿಯಾಗಿದ್ದರೆ..! ಹೌದು ಇಲ್ಲಿ ನಬಿಲ್ ಎಂಬ ಯುವಕನೊಬ್ಬ ಅಮೆಜಾನ್ ನಲ್ಲಿ 1400 ರೂಪಾಯಿಯ ಪವರ್ ಬ್ಯಾಂಕ್ ಅನ್ನು ಆ’ರ್ಡರ್ ಮಾಡುತ್ತಾನೆ. ಕೆಲವು ದಿನಗಳ ನಂತರ ಆ’ರ್ಡರ್ ಆತನ ಮನೆಗೆ ಬಂದು ತಲುಪುತ್ತದೆ. ಆದರೆ ನಬೀಲ್ ಅದನ್ನ ಬಿಚ್ಚಿ ನೋಡಿದಾಗ ಆತನಿಗೆ ನಂಬಲಾರದ ಅ’ಚ್ಚರಿಯೊಂದು ಅಲ್ಲಿ ಕಾದಿರುತ್ತದೆ. ಏನು ಅದು ನೋಡೋಣ ಬನ್ನಿ.

Advertisements
Advertisements

ಕೇರಳದ ಮಲ್ಲಪುರಂ ಕೋಟಕ್ಕಲ್ ನ ನಬೀಲ್ ಎಂಬ ಯುವಕ ಆನ್ಲೈನ್ ಮೂಲಕ ಅಮೆಜಾನ್ ನಲ್ಲಿ ೧೪೦೦ರೂಗಳ ಪವರ್ ಬ್ಯಾಂಕ್ ಆ’ರ್ಡರ್ ಮಾಡಿದ್ದ, ಆದರೆ ಮನೆಗೆ ಬಂದ ಪಾರ್ಸೆಲ್ ಅನ್ನು ತೆಗೆದು ನೋಡಿದಾಗ ತಾನು ಆ’ರ್ಡರ್ ಮಾಡಿದ ವಸ್ತುವಿಗಿಂತ ದುಬಾರಿ ವಸ್ತು ಅದರಲ್ಲಿ ಬಂದಿರುತ್ತದೆ. 8 ಸಾವಿರ ರೂ ಮೌಲ್ಯದ ರೆಡ್ ಮಿ 8A ಫೋನ್ ಆ ಪಾರ್ಸಲ್ ನಲ್ಲಿ ಇರುತ್ತದೆ. ಅಚ್ಚರಿಗೊಂಡ ಆತ ನಾನು ಖರೀದಿ ಮಾಡಿದ್ದೂ ಪವರ್ ಬ್ಯಾಂಕ್ ನೀವು ಮೊಬೈಲ್ ಕಳುಹಿಸಿದ್ದೀರಿ, ಅದನ್ನ ನಾನು ಇಟ್ಟುಕೊಳ್ಳಬೇಕೋ ಅಥವಾ ವಾಪಾಸ್ ಕಳುಹಿಸಬೇಕೋ ಎಂದು ಅಮೆಜಾನ್ ಗೆ ಟ್ವೀಟ್ ಮೂಲಕ ವಿಚಾರ ತಿಳಿಸಿದ್ದಾನೆ.

ನಂತರ ಅಮೆಜಾನ್ ಕಡೆಯಿಂದ ಒಂದು ಮೆಸೇಜ್ ಬರುತ್ತದೆ. ಆ ಮೆಸೇಜ್ ಏನಾಗಿರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ ಎಲ್ಲರಿಗೂ ಅ’ಚ್ಚರಿ ಮೂಡಿಸುವಂತಹ ಮೆಸೇಜನ್ನು ಅಮೆಜಾನ್ ಅವರು ಕಳಿಸಿರುತ್ತಾರೆ. ಆ ಮೆಸೇಜ್ ಏನೆಂದರೆ, ಆ ಯುವಕನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡ ಅಮೆಜಾನ್ ಕಂಪನಿ ಆ ಮೊಬೈಲನ್ನು ನೀವು ಇಟ್ಟುಕೊಳ್ಳಬಹುದು ಅಥವಾ ಯಾರಿಗಾದರೂ ಡೊನೇಟ್ ಕೂಡ ಮಾಡಬಹುದು ಎಂದು ರೀ ಟ್ವೀಟ್ ಮಾಡಿದೆ. ಇನ್ನು ಯುವಕನ ಪ್ರಾಮಾಣಿಕತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿವೆ. ಈ ಯುವಕನ ಪ್ರಾಮಾಣಿಕತೆಗೆ ನಿಮ್ಮ ಮೆಸೇಜ್ ಏನು ಸ್ನೇಹಿತರೆ.