Advertisements

ಮನೆಯಲ್ಲಿ ಉಳಿದುಕೊಂಡೇ 1 ಕೋಟಿ ಗಳಿಸಿದ ಈ ಹುಡುಗ! ಅದು ಹೇಗೆ ಅಂದರೆ?…

Inspiration

ನಮಸ್ತೆ ಸ್ನೇಹಿತರೆ, ನಮ ಸುತ್ತಮುತ್ತಲು ಹಲವಾರು ಮಂದಿ ಮನೆಯಲ್ಲಿದ್ದುಕೊಂಡೆ ಸಂಪಾದನೆ ಮಾಡುತ್ತಾರೆ. ಅದೇ ರೀತಿ ಒಬ್ಬ ಹುಡುಗ ಮನೆಯಲ್ಲಿದ್ದುಕೊಂಡೆ ಒಂದು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾನೆ. ಈ ಹುಡುಗ ಯಾರು ಈ ಹುಡುಗ ಎಲ್ಲಿಯವನು ಹೇಗೆ ಇಷ್ಟು ಹಣವನ್ನು ಸಂಪಾದಿಸಿದನು ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು. ಹೌದು ಈತನ ಹೆಸರು ಯುವರಾಜ್, ಈತ ರಾಜಸ್ಥಾನದ ಒಂದು ಕುಗ್ರಾಮದಲ್ಲಿ ವಾಸ ಮಾಡುತ್ತಿದ್ದಾನೆ. ಈತನ ತಂದೆ ಟೈಲ್ಸ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಕುಟುಂಬದವರು ಅದೆಷ್ಟು ಬಡವರಾಗಿದ್ದರೂ ಅಂದರೆ ಒಂದು ಮೊಬೈಲ್ ಕೂಡ ಇವರ ಮನೆಯಲ್ಲಿ ಇರಲಿಲ್ಲ. ಆದರೆ ಒಂದು ದಿನ ಯುವರಾಜ್ ಮತ್ತು ಅವನ ಸಹೋದರಿ ಇಬ್ಬರು ಸೇರಿ ತುಂಬಾ ದಿನದಿಂದ ಕೂಡಿಸಿಟ್ಟ ಹಣವನ್ನು ತೆಗೆದುಕೊಂಡು ಹೋಗಿ ಮೊಬೈಲ್ ಅನ್ನು ತೆಗೆದುಕೊಂಡು ಬರುತ್ತಾರೆ.

Advertisements
Advertisements

ನಂತರ ಮೊಬೈಲ್ ನಲ್ಲಿ ಡ್ಯಾನ್ಸ್ ವಿಡಿಯೋ ನೋಡುತ್ತಾ ನೋಡುತ್ತಾ ಯುವರಾಜ್ ಗೆ ಬಾಲಿವುಡ್ ಹೀರೋ ಮಾಡಿದಂತಹ ಡಾನ್ಸ್ ತುಂಬಾ ಇಷ್ಟವಾಗಿಬಿಟ್ಟು, ಅವರ ಡ್ಯಾನ್ಸ್ ನಿಂದ ಪ್ರೇರೇಪಿತನಾಗಿ ಮನೆಯಲ್ಲಿಯೇ ಮೊಬೈಲ್ ಅನ್ನು ನೋಡುತ್ತಾ ಡ್ಯಾನ್ಸ್ ಅನ್ನು ಕಲಿತುಕೊಂಡನು. ಈ ಹುಡುಗನ ಡಾನ್ಸ್ ಅನ್ನು ನೋಡಿ ಎಲ್ಲರೂ ಕೂಡ ನಗುತ್ತಿದ್ದರು. ಯಾರು ಏನೇ ಅಂದುಕೊಳ್ಳಲಿ ಎಂದು ತಲೆಕೆ’ಡಿಸಿಕೊಳ್ಳದೆ ಯುವರಾಜ್ ತನ್ನ ಕಲಿಕೆಯನ್ನು ಮುಂದುವರಿಸಿದನು. ಒಳ್ಳೆಯ ಡ್ಯಾನ್ಸ್ ಅನ್ನು ಮಾಡಿ ತನ್ನ ಡ್ಯಾನ್ಸ್ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಮಾಡಿದಾಗ, ಇವನ ಡಾನ್ಸ್ ಗೆ ಸಾಕಷ್ಟು ಲೈಕ್ಸ್ ಗಳು ಶೇರ್ಸ್ ಗಳು ಕೂಡ ಸಿಕ್ಕಿತು.

ಲಾಕ್ ಡೌನ್ ನಲ್ಲಿ ಫ್ಲಿಪ್ಕಾರ್ಟ್ನವರು ಏರ್ಪಡಿಸಿದ್ದ ಸ್ಟೇ ಹೋಂ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ ಯುವರಾಜ್ ಬರೊಬ್ಬರಿ ಒಂದು ಕೋಟಿ ಹಣವನ್ನು ಸಂಪಾದಿಸಿದ್ದಾನೆ. ಯಾವ ರೀತಿ ಎಂದರೆ ಸ್ಟೇ ಹೋಂ ಸ್ಪರ್ಧೆಯಲ್ಲಿ ಮನೆಯಲ್ಲಿಯೇ ಕುಳಿತು ಯಾರು ಒಳ್ಳೆಯ ಮನರಂಜನೆಯನ್ನು ನೀಡುತ್ತಾರೋ, ಅಂತಹ ಸ್ಪರ್ಧಿಗಳಿಗೆ ಒಂದು ಕೋಟಿ ಹಣವನ್ನು ನೀಡಲಾಗುತ್ತದೆ ಎಂದು ಫ್ಲಿಪ್ ಕಾರ್ಟ್ ಘೋಷಣೆ ಮಾಡಿತ್ತು, ಇದರಿಂದ ಯುವರಾಜ್ ಒಂದು ಕೋಟಿ ಹಣವನ್ನು ಗೆದ್ದಿದ್ದು, ಯುವರಾಜ್ ಮಾಡಿದಂತಹ ಡ್ಯಾನ್ಸ್ ಅಮಿತಾಭ್ ಬಚ್ಚನ್, ಹೃತಿಕ್ ರೋಶನ್ ಗೂ ಕೂಡ ಬಹಳ ಇಷ್ಟವಾಗಿದೆಯಂತೆ. ಈತನನ್ನು ಇದೀಗ ಜನ ಬಾಬಾ ಜಾಕ್ಸನ್ ಅಂತ ಕೂಡ ಕರೆಯುತ್ತಾರಂತೆ. ಯುವರಾಜ್ ಮಾಡಿದ ಸಾಧನೆಯ ಬಗ್ಗೆ ನೀವೇನಂತೀರ ಸ್ನೇಹಿತರೆ.