Advertisements

ಬಯಲಾಯಿತು ಯುವರತ್ನ ಸಿನಿಮಾದ ಕಲೆಕ್ಷನ್ ! ಯುವರತ್ನ ಸಿನಿಮಾ ಗಳಿಸಿದ ಮೊತ್ತ ಎಷ್ಟು ಗೊತ್ತಾ??

Cinema

ನಮಸ್ತೆ ಸ್ನೇಹಿತರೆ, ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಯುವರತ್ನ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದಿದೆ. ಬಿಡುಗಡೆಯಾದ ಮೊದಲ ಕೆಲವು ದಿನಗಳ ಕಾಲ ಯಾವುದೇ ಸಮಸ್ಯೆಗಳು ಎದುರು ಬಂದಿರಲಿಲ್ಲ, ಆದರೆ ಕೇವಲ ಕೆಲವೇ ದಿನಗಳಲ್ಲಿ ಥಿಯೇಟರ್ ವೀಕ್ಷಕರ ಸಂಖ್ಯೆಯನ್ನು ಶೇಕಡ 50% ಕ್ಕೆ ತರಲಾಗಿತ್ತು, ನಂತರ ಇದಾದ ಬಳಿಕ ಕನ್ನಡ ಚಿತ್ರರಂಗ ಒಗ್ಗೂಡಿ ಮಾಡಿದ ಮನವಿಗೆ ಶೇಕಡ 100% ಜನರಿಗೆ ಮತ್ತಷ್ಟು ದಿನಗಳ ಕಾಲಾವಕಾಶ ನೀಡಲಾಗಿತ್ತು. ನಂತರ 50% ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಶೇಕಡಾ ಐವತ್ತರಷ್ಟು ಬರ್ತಿ ಅವಕಾಶವಿದ್ದರೂ ಕೂಡ ಯುವರತ್ನ ಸಿನಿಮಾವನ್ನು 28 ಕೋಟಿ ಗಳಿಗೆ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಮೆಜಾನ್ ಪ್ರೈಮ್ ನಲ್ಲಿಯೂ ಕೂಡ ಯುವರತ್ನ ಸಿನಿಮಾ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

Advertisements
Advertisements

ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ದಿನದಿಂದಲೂ ಕೂಡ ಚಿತ್ರತಂಡ ಯಾವುದೇ ಅಫಿಶಿಯಲ್ ಮಾಹಿತಿಯನ್ನು ಕಲೆಕ್ಷನ್ ಮೊತ್ತದ ಕುರಿತು ಮಾತನ್ನು ಹೊರ ಹಾಕಿರಲಿಲ್ಲ, ಆದರೆ ಇದೀಗ ಬಲ್ಲಮೂಲಗಳಿಂದ ಚಿತ್ರದ ಮೊತ್ತದ ಕಲೆಕ್ಷನ್ ಹೊರ ಬಂದಿದೆ. ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ ಅಂದರೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುವ ಮುನ್ನ ಯುವ ರತ್ನ ಸಿನಿಮಾ ಕೇವಲ 30 ಕೋಟಿ ಗಳಿಸಿದೆ ಎಂಬುದು ತಿಳಿದುಬಂದ ಮಾಹಿತಿಯಾಗಿದೆ. ಪೊಗರು ಸಿನಿಮಾ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದರೇ, ರಾಬರ್ಟ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಎರಡು ಚಿತ್ರಗಳ ಕಲೆಕ್ಷನ್ ಮೀರಿಸುವಲ್ಲಿ ಯುವರತ್ನ ಸಿನಿಮಾ ಥಿಯೇಟರ್ ಗಳಲ್ಲಿ ವಿಫಲವಾಗಿದೆ, ಆದರೆ ಅಮೆಜಾನ್ ಪ್ರೈಮ್ ಮೊತ್ತವನ್ನು ಸೇರಿಸಿಕೊಂಡರೆ ಯುವರತ್ನ ಸಿನಿಮಾ ಪೊಗರು ಸಿನಿಮಾದ ಮೊತ್ತವನ್ನು ಮೀರಿಸಲಿದೆ.

ಕೊರೋನಾ ಎಂಬ ಮಹಾಮಾರಿಯು ಬಂದು ಸಿನಿಮಾದವರಿಗೆ ಅಲ್ಲದೆ ಇಲ್ಲಾ ಜನಸಾಮಾನ್ಯರಿಗೂ ತೊಂದರೆ ಉಂಟುಮಾಡಿದೆ. ಬರೀ ಯುವರತ್ನ ಸಿನಿಮಾ ಅಲ್ಲದೆ, ಅನೇಕ ಭಾಷೆಗಳ ಸಿನಿಮಾಗಳು ಕೂಡ ಕೊರೋನಾದ ನಿಯಮ ನಿಬಂಧನೆಗಳಿಂದ ಥಿಯೇಟರ್ನಲ್ಲಿ ಯಶಸ್ವಿಯಾಗಲು ಪರದಾಡುತ್ತಿವೆ. ಕೋರೋನ ಎಂಬ ಮಹಾಮಾರಿಯು ತೊಲಗಿ ಎಲ್ಲರಿಗೂ ಶುಭವನ್ನುಂಟುಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.