Advertisements

ಮದುವೆ ಮಂಟಪದಲ್ಲಿಯೇ ಬಿದ್ದು ಒದ್ದಾಡುತ್ತಿರುವ ಈ ಹೆಣ್ಣು ಮಗಳು ಯಾರು ಗೊತ್ತಾ.. ಪ್ರೀತಿಸಿ ಆದರೆ ದಯವಿಟ್ಟು ಇಂತಹ ಕೆಲಸ ಮಾಡಬೇಡಿ..

Kannada News

ಪ್ರೀತಿ ಅನ್ನೋದು ಜೀವನದಲ್ಲಿ ಅತ್ಯವಶ್ಯಕವಾದ ಅಂಶ.. ಅದು ಕೆಲವರ ಜೀವನದಲ್ಲಿ ಮದುವೆಯ ನಂತರವಾದರೆ.. ಮತ್ತೆ ಕೆಲವರ ಜೀವನದಲ್ಲಿ ಮದುವೆಗೆ ಮುನ್ನವೇ ಆಗಿ ಹೋಗುತ್ತದೆ.. ಅಂತಹ ಪ್ರೀತಿ ಕೆಲವರ ಜೀವನದಲ್ಲಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಅಡಿಪಾಯವಾದರೆ ಮತ್ತೆ ಕೆಲವರ ಜೀವನದಲ್ಲಿ ಅದು ಬಿರುಗಾಳಿಯಾಗಿ ಬಿಡುತ್ತದೆ.. ಅದೇ ರೀತಿ ಇಲ್ಲೊಬ್ಬ ಹೆಣ್ಣು ಮಗಳಲ್ಳಿಗೆ ಮದುವೆ ಮಂಟಪದಲ್ಲಿಯೇ ಮಾಡಿದ ಕೆಲಸ ನೋಡಿದರೇ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಹೌದು ಈಕೆ ಆತನನ್ನು ಪ್ರೀತಿಸಿದಳು.. ಆತ ಇವಳನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾಗಲು ಸಿದ್ಧವಾದ..

ವಿಚಾರ ತಿಳಿದು ಆತನ ಮದುವೆಯ ದಿನವೇ ಮದುವೆ ನಡೆಯುತ್ತಿದ್ದ ಮಂಟಪಕ್ಕೆ ಆ ಹುಡುಗಿ ಹೋದಳು.. ಮುಂದೆ ನಡೆದದ್ದು ಮಾತ್ರ ನಿಜಕ್ಕೂ ಮನಕಲಕುವಂತಿದೆ.. ಹೌದು ಈ ಹೆಣ್ಣು ಮಗಳು ಕಳೆದ ಎಂಟು ವರ್ಷದಿಂದ ಶ್ರೀನಾಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು.. ಆತನು ಸಹ ಪ್ರೀತಿಸುವ ನಾಟಕವಾಡುತ್ತಿದ್ದ.. ಆತನ ನಾಟಕವನ್ನೇ ನಿಜವಾದ ಪ್ರೀತಿ ಎಂದು ತಿಳಿದು ಈಕೆಯೂ ದಿನಕಳೆಯುತ್ತಿದ್ದಳು.. ಶ್ರೀನಾಥ್ ಪ್ರತಿ ಬಾರಿಯೂ ಆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸುತ್ತಿದ್ದ.. ಪ್ರೀತಿಯ ಮಾತುಗಳನ್ನಾಡುತ್ತಿದ್ದ.. ಅದನ್ನೆಲ್ಲಾ ನಂಬಿದ ಆ ಯುವತಿ ಒಂದು ಹೆಜ್ಜೆ ಮುಂದೆ ಹೋಗಿ ಆತನಿಗೆ ತನ್ನ ಸರ್ವಸ್ವವನ್ನು ನೀಡಿದ್ದಳು..

ಹೌದು ಶ್ರೀನಾಥ್ ಹಾಗೂ ಆ ಯುವತಮ್ತಿ ಇಬ್ಬರೂ ಸಹ ಎಲ್ಲಾ ರೀತಿಯ ಸಂಬಂಧವನ್ನು ಹೊಂದಿದ್ದರು.. ಇದು ಪದೇ ಪದೇ ನಡೆದಿತ್ತು.. ಇನ್ನೇನು ಮದುವೆಯಾಗೋಣ ಎನ್ನುವ ಮಾತು ಬಂದ ನಂತರ ಶ್ರೀನಾಥ್ ನ ವರಸೆ ಬದಲಾಗಿತ್ತು.. ಇತ್ತ ಶ್ರೀನಾಥ್ ಆ ಯುವತಿಯನ್ನು ಬಿಟ್ಟು ಮತ್ತೊಂದು ಮದುವೆಯಾಗುವ ನಿರ್ಧಾರ ಮಾಡಿ ಇಂದು ಮದುವೆಯೂ ಸಹ ನಡೆಯುತಿತ್ತು.. ಅತ್ತ ಈ ವಿಚಾರ ತಿಳಿದ ಕಂಗಾಲಾದಳು.. ತಾನು ಪ್ರೀತಿಸಿದ್ದ ಹುಡುಗ ಶ್ರೀನಾಥ್ ಎಂದೂ ಸಹ ಇಂತಹ ಕೆಲಸ ಮಾಡುತ್ತಾನೆ ತನಗೆ ಮೋಸ ಮಾಡುತ್ತಾನೆ ಎಂದುಕೊಂಡಿರಲಿಲ್ಲ..

ಆದರೆ ಮದುವೆಯ ವಿಚಾರ ತಿಳಿದು ತಕ್ಷಣ ಮದುವೆ ಮಂಟಪಕ್ಕೆ ಓಡೋಡಿ ಬಂದಿದ್ದಾಳೆ.. ವರನ ಮನೆಯವರ ಜೊತೆಯೂ ತನ್ನ ಪ್ರೀತಿಯ ವಿಚಾರ ಹೇಳಿದ್ದಾಳೆ.. ನಿಮ್ಮ‌ ಮಗ ನನ್ನನ್ನು ಪ್ರೀತಿಸುತ್ತಿದ್ದಾನೆ.. ಅವನ ಜೊತೆ ನನ್ನ ಮದುವೆ ಮಾಡಿ ಎಂದು ಕೇಳಿಕೊಂಡಿದ್ದಾಳೆ.. ಆದರೆ ಆ ಹೆಣ್ಣು ಮಗಳ ಮಾತಿಗೆ ಬಗ್ಗದ ಶ್ರೀನಾಥ್ ಕುಟುಂಬದವರು ಆಕೆಯನ್ನು ಮಂಟಪದಿಂದ ಹೊರ ಹೋಗುವಂತೆ ಹೇಳಿದ್ದಾರೆ.. ಆದರೆ ಆಕೆ ಹೋಗಲು ನಿರಾಕರಿಸಿದಾಗ ಆಕೆಯನ್ನು ಜುಟ್ಟು ಹಿಡಿದು ಎಳೆದುಕೊಂಡು ಹೋಗಲು ಮುಂದಾಗಿದ್ದು ಆ ಯುವತಿ ಅಷ್ಟೆಲ್ಲಾ ಆದರೂ ಸಹ ಮಂಟಪ ಬಿಟ್ಟು ಹೋಗೋದಿಲ್ಲ ಎಂದು ಅಲ್ಲಿಯೇ ಬಿದ್ದು ಒದ್ದಾಡಿದ್ದಾಳೆ.. ಆದರೆ ಕರುಣೆ ಇಲ್ಲದ ಶ್ರೀನಾಥ್ ಹಾಗೂ ಕುಟುಂಬದವರು ಆಕೆಯನ್ನು ಎಳೆದು ಆಚೆ ಹಾಕಿದ್ದಾರೆ..

ಈ ಘಟನೆ ನಡೆದದ್ದು ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಖಮ್ಮಮ್ಮ್ ನಗರದಲ್ಲಿ ನಡೆದಿದ್ದು ಎಂಟು ವರ್ಷದ ಪ್ರೀತಿ ಈ ರೀತಿ ಅಂತ್ಯವಾಗಿದೆ.. ಅತ್ತ ಪೊಲೀಸರು ಎದುರೇ ಇದ್ದರೂ ಸಹ ಅವರು ಏನೂ ಮಾಡಲಿಲ್ಲ ಎಂದು ಆ ಹೆಣ್ಣು ಮಗಳು ಅಳಲನ್ನು ತೋಡಿಕೊಂಡಿದ್ದಾಳೆ.. ಶ್ರೀನಾಥ್ ನನ್ನನ್ನು ಪ್ರೀತಿಸುತ್ತಿದ್ದೀನಿ ಅಂತ ನಂಬಿಸಿದ ನಾನು ಅದನ್ನು ನಂಬಿ ಅವನಿಗೆ ಎಲ್ಲವನ್ನು ಧಾರೆ ಎರೆದೆ ಆದರೆ ಅವನು ಈಗ ಇಲ್ಲಿಗೆ ಬಂದು ಬೇರೆ ಹುಡುಗಿ ಜೊತೆ ಮದುವೆ ಆಗ್ತಿದ್ದಾನೆ.. ಅವರ ಮನೆಯವರನ್ನೂ ಸಹ ಕೇಳಿಕೊಂಡೆ ಆದರೆ ಅವರು ನನ್ನನ್ನು ಈ ರೀತಿ ಹೊರಗೆ ಹಾಕಿದ್ದಾರೆ ಎಂದು ಕಣ್ಣೀರಿಟ್ಟಿದ್ದಾಳೆ.. ನಿಜಕ್ಕೂ ಈ ಘಟನೆ ಆ ಯುವತಿಯ ಜೀವನದಲ್ಲಿ ನೋವಿನ ಘಟನೆಯಾದರೂ ಸಹ ಸಾಕಷ್ಟು ಜನರಿಗೆ ಪಾಠವೇ ಸರಿ.. ಪ್ರೀತಿಸಿ.. ಪ್ರೀತಿ ಮಾಡೋದು ತಪ್ಪಲ್ಲ ನಿಜ..

ಆದರೆ ಮದುವೆಗೆ ಮುನ್ನ ದಯವಿಟ್ಟು ಯಾರೂ ಸಹ ದುಡುಕಿ ಬೇರೆ ರೀತಿಯ ಸಂಬಂಧಗಳನ್ನು ಹೊಂದಬೇಡಿ.. ಅಂತಹ ಸಂಬಂಧವನ್ನು ಮದುವೆಗೆ ಮುನ್ನವೇ ಅಪೇಕ್ಷೆ ಪಡುವ ಹೆಣ್ಣಾಗಲಿ ಗಂಡಾಗಲಿ ಅವರದ್ದು ನಿಜವಾದ ಪ್ರೀತಿಯೇ ಆಗಿರುವುದಿಲ್ಲ.. ಅದು ಅತಿರೇಕಕ್ಕೆ ಹೋದರೆ ಆಗಲೇ ಎಚ್ಚೆತ್ತುಕೊಂಡು ಅಂತವರಿಂದ ಅಂತರ ಕಾಯ್ದುಕೊಳ್ಳುವುದೇ ಒಳ್ಳೆಯದು.. ನಿಮ್ಮ ಹೆತ್ತವರ ಬಗ್ಗೆ ಗಮನ ಕೊಡಿ.. ಅವರ ಪ್ರೀತಿ ಮುಂದೆ ಇಂತಹ ಸುಳ್ಳು ಪ್ರೀತಿಗಳಿಗೆ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ.. ಅದರಲ್ಲೂ ತಿಳುವಳಿಕೆ ಬಂದು ಜೀವನದಲ್ಲಿ ಒಂದು ಹಂತಕ್ಕೆ ಬಂದು ಸೆಟಲ್ ಆಗುವವರೆಗೂ ಪ್ರೀತಿ ಅದು ಇದು ಎಂದು ಭವಿಷ್ಯ ರೂಪಿಸಿಕೊಳ್ಳುವುದ ಮರೆತರೆ ಬಹುಶಃ ಬಹುತೇಕರ ಪಾಡು ಇದೇ ಆಗಿರುತ್ತದೆ.. ಎಚ್ಚರವಾಗಿರಿ.. ಯಾರ ಬದುಕಲ್ಲೂ ಇಂತಹ ಘಟನೆಗಳು ನಡೆಯದಿರಲಿ..