Advertisements

ರೀಲ್ಸ್ ಮಾಡುತ್ತಲೇ ಪ್ರೀತಿಸಿ ಬೆಂಗಳೂರಿನಲ್ಲಿ ಮದುವೆಯಾದ ಜೋಡಿ.. ಮಂಚದ ಕೆಲಸ ಮುಗಿಸಿದ ಮೂರೇ ದಿನಕ್ಕೆ ಇವರ ಸ್ಥಿತಿ ಏನಾಗಿದೆ ನೋಡಿ.. ಬೇಕಿತ್ತಾ ಇದು..

Kannada News

ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಸಾಮಾಜಿಕ‌ ಜಾಲತಾಣದ ಬಳಕೆ ಹೆಚ್ಚಾದಂತೆ ವೀಡಿಯೋಗಳು ಫೋಟೋಗಳನ್ನು ನೋಡಿ ಆಕರ್ಷಣೆಯ ಗೀಳಿಗೆ ಬೀಳೋದು.. ಅದನ್ನೇ ಪ್ರೀತಿ ಎಂದುಕೊಂಡು ಹೆತ್ತ ಅಪ್ಪ ಅಮ್ಮನನ್ನು ಬಿಟ್ಟು ಹೋಗೋದು.. ನಂತರ ಜೀವನ‌ವನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಂಡರೇನೋ ಸರಿ.. ಆದರೆ ಎಲ್ಲಾ ಬಿಟ್ಟು ಬಂದು ಜೀವನ ಹಾಳು ಮಾಡಿಕೊಂಡು ಬೀದಿಗೆ ಬೀಳೋದು ನಿಜಕ್ಕೂ ವಯಸ್ಸಿನ ಆಸೆಗಳಿಗೆ ಕಡಿವಾಣ ಹಾಕದಿದ್ದರೆ ಏನಾಗುವುದು ಎಂಬುದಕ್ಕೆ ನೈಜ್ಯ ಉದಾಹರಣೆಯಾಗಿದೆ ಈ ಘಟನೆ.. ಹೌದು ಇದೊಂದು ರೀತಿ ಹುಬ್ಬಳ್ಳಿ ಟು ಬೆಂಗಳೂರಿನ ರೀಲ್ಸ್ ಲವ್ ಸ್ಟೋರಿ ಎಂದರೆ ತಪ್ಪಾಗಲಾರದು..

ಹೌದು ಟಿಕ್ ಟಾಕ್ ರೀಲ್ಸ್ ಅದು ಇದು ಅಂತ ಬಂದ ಮೇಲೆ ಮೊಬೈಲ್ ಬಳಕೆ ಹೆಚ್ಚಾಗಿರೋದು ಸುಳ್ಳಲ್ಲ.. ಹಾಗೆಯೇ ಹೆಣ್ಣು‌ಮಕ್ಕಳು ಗಂಡು ಮಕ್ಕಳೆನ್ನದೇ ಸಾಕಷ್ಟು ಮಂದಿ ಪ್ರೀತಿಯ ಬಲೆಯಲ್ಲಿ ಬಿದ್ದು ಮೋಸ ಹೋಗಿರೋದು ಸಹ ಸುಳ್ಳಲ್ಲ.. ಅದೇ ರೀತಿ ಟಿಕ್ ಟಾಕ್ ನಲ್ಲಿ ವೀಡಿಯೋ ‌ಮಾಡುತ್ತಾ ಮಾಡುತ್ತಾ ಪರಿಚಯವಾಗಿ ನಂತರ ರೀಲ್ಸ್ ನಲ್ಲಿ ಸ್ನೇಹ ಮುಂದುವರೆಸಿ ಅದು ಪ್ರೀತಿಯಾಗಿ ಕೊನೆಗೆ ಮನೆ ಬಿಟ್ಟು ಬಂದು ಮದುವೆಯಾಗಿ ಈಗ ಆಕೆ ಬೀದಿಗೆ ಬಿದ್ದಿದ್ದಾಳೆ.. ಹೌದು ಟಿಕ್ ಟಾಕ್ ಹಾಗೂ ರೀಲ್ಸ್ ಮಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ ಚಾಲಾಕಿ ಹೈದ ಈಗ ಆಕೆಯ ಜೊತೆ ಎಲ್ಲಾ ಕೆಲಸ ಮುಗಿಸಿ ಆಕೆಗೆ ಕೈಕೊಟ್ಟಿದ್ದಾನೆ.. ಇದೀಗ ಆ ಯುವತಿ ನನಗೆ ನನ್ನ ಗಂಡ ಬೇಕು ಅಂತ ಬೆಂಗಳೂರಿನ ಕೆ ಆರ್ ಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ..

ಹೌದು ಈಕೆ ಹುಬ್ಬಳ್ಳಿ ಮೂಲದ ಯುವತಿ.. ಟಿಕ್ ಟಾಕ್ ನಲ್ಲಿ ವೀಡಿಯೋ ಮಾಡೋ ಯುವತಿಯರ ಪೈಕಿ ಈಕೆಯೂ ಒಬ್ಬಳು.. ಇನ್ನು ಈ ಹೆಣ್ಣು ಮಗಳನ್ನು ಅತ್ತ ಟಿಕ್ ಟಾಕ್ ನಲ್ಲಿ ವೀಡಿಯೋ‌ ಮಾಡುತ್ತಿದ್ದ ರಮೇಶ್ ಎಂಬಾತ ಪರಿಚಯ ಮಾಡಿಕೊಂಡಿದ್ದಾನೆ..‌ ಪರಿಚಯದ ನಂತ ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದಾನೆ.. ನನಗೆ ನೀನೇ ಬೇಕು.. ನೀನೇ ನನ್ನ ಜೀವ ಜೀವನ.. ನಿನ್ನ ಮದುವೆಯಾಗ್ತೀನಿ.. ಎಂದೆಲ್ಲಾ ಕತೆ ಬಿಟ್ಟಿದ್ದಾನೆ.. ಅತ್ತ ಯುವತಿಯೂ ಅದನ್ನೆಲ್ಲಾ ನಂಬಿ ಇವನನ್ನೇ ಮದುವೆಯಾಗಲು ಹೆತ್ತ ಅಪ್ಪ ಅಮ್ಮನನ್ನೇ ಬಿಡುವ ನಿರ್ಧಾರ ಮಾಡಿ ಬಿಟ್ಟಿದ್ದಳು..

ಹೆತ್ತವರನ್ನೇನೋ ಬಿಡೋ ನಿರ್ಧಾರವೇನೋ ಮಾಡಿದಳು.. ಆದರೆ ಅಷ್ಟಕ್ಕೆ ಸುಮ್ಮನಾಗದೇ ಹೆತ್ತವರು ಮಾಡಿಟ್ಟಿದ್ದ ಚಿನ್ನ ಹಣ ಎಲ್ಲವನ್ನೂ ಸಹ ಜೊತೆಯಲ್ಲೇ ತಂದಳು.. ಸುಲಭವಾಗಿ ಹೇಳಬೇಕೆಂದರೆ ಹೆತ್ತ ಅಪ್ಪ ಅಮ್ಮನ ಬೆವರಿನ ಹಣ ಚಿನ್ನ ಎಲ್ಲವನ್ನೂ ಸಹ ಕದ್ದು ತಂದು ಮದುವೆಯಾದಳು.. ಹೌದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಚಿನ್ನ ಹಾಗೂ ಹಣದ ಸಮೇತ ಬಂದ ಹುಡುಗಿ ರಮೇಶನನ್ನು ದೇವಸ್ಥಾನವೊಂದರಲ್ಲಿ ಮದುವೆಯಾದಳು.. ಮದುವೆಯ ನಂತರದ ಬದುಕು ಸುಂದರ ಎಂದುಕೊಂಡಳು..

ಆದರೆ ಅದು ಅತಿ ಸುಂದರವಾಗಿ ಹೋಯ್ತು.. ಹೌದು ಯುವತಿಯನ್ನು ಮದುವೆಯಾದ ಆಸಾಮಿ ರಮೇಶ ಆಕೆಯ ಜೊತೆ ಸಂಸಾರ ಶುರು ಮಾಡಿ ಎಲ್ಲಾ ಕೆಲಸವನ್ನು ಮುಗಿಸಿಕೊಂಡು ಆಸೆ ತೀರಿಸಿಕೊಂಡ.. ನಂತರ ಆಕೆ ತಂದಿದ್ದ ಹಣವನ್ನು ಬಳಸಿಕೊಂಡ ನಂತರ ಚಿನ್ನದ ಸರದಿ ಅದನ್ನೂ ಮಾರಾಟ ಮಾಡಿಕೊಂಡ.. ಆಗಲೂ ಸಹ ಪ್ರೀತಿಯ ನಶೆಯಲ್ಲಿಯೇ ತೇಲುತ್ತಿದ್ದ ಯುವತಿಗೆ ರಮೇಶನ ಗುಣ ಅರ್ಥವೇ ಆಗಲಿಲ್ಲ.. ಹಣ ಕೊಟ್ಟಳು ಚಿನ್ನ ಕೊಟ್ಟಳು.. ತನ್ನ ಸರ್ವಸ್ವವನ್ನೇ ಕೊಟ್ಟಳು.. ಕೊನೆಗೆ ರಮೇಶ ಆಕೆಯ ಹೆಸರಲ್ಲಿ ಎರಡು ಲಕ್ಷ ರೂಪಾಯಿ ಲೋನ್ ಕೂಡ ತೆಗೆದುಕೊಂಡ.. ಆಗಲೂ ಆಕೆಗೆ ಪ್ರೀತಿಯ ನಶೆ ಇಳಿದಿರಲಿಲ್ಲ..

ಕೊನೆಗೆ ಆತ ಎಲ್ಲಾ ಮುಗಿದ ಬಳಿಕ ನೀನು ಬೇಡವೆಂದು ಆಕೆಯನ್ನು ಬಿಟ್ಟು ಹೋದ.. ಇತ್ತ ನನ್ನ ರಮೇಶ ಎಲ್ಲಿ ಹೋದ ಎಂದ ಆಕೆ ಬೀದಿಯಲ್ಲಿ ನಿಲ್ಲುವಂತಾಗಿದೆ.. ಹೌದು ಪ್ರೀತಿಯನ್ನು ನಂಬಿ ಹೆತ್ತವರನ್ನು ಬಿಟ್ಟು ಹಣ ಚಿನ್ನ ತಂದ ಯುವತಿಗೆ ಈಗ ಅತ್ತ ಪೋಷಕರೂ ಇಲ್ಲ.. ಇತ್ತ ಗಂಡನೂ ಇಲ್ಲ ಎನ್ನುವಂತಾಗಿದೆ.. ನನಗೆ ನನ್ನ ಗಂಡ ಬೇಕು ಎಂದು ಇದೀಗ ಕೆ ಆರ್ ಪುರಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ರಮೇಶ ಮರಳಿ ಬರುವನಾ ತಿಳಿಯದಾಗಿದೆ.. ನಿಜಕ್ಕೂ ಈಗಿನ ಹೆಣ್ಣು‌ಮಕ್ಕಳೇ ಆಗಲಿ ಗಂಡು ಮಕ್ಕಳೇ ಆಗಲಿ‌ ಅವರುಗಳಿಗೆ ಇದೊಂದು ರೀತಿಯ‌ ಪಾಠವೇ ಸರಿ.. ದಯವಿಟ್ಟು ಗೊತ್ತು ಗುರಿ‌ ಇಲ್ಲದೇ ಮೂರು ದಿನದ ಹಿಂದೆ ಪರಿಚಯವಾದವರನ್ನು‌ ನಂಬಿ ಈ ರೀತಿ‌ ಜೀವನ ಹಾಳು ಮಾಡಿಕೊಳ್ಳಬೇಡಿ.. ಅದರಲ್ಲೂ ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನೇ ಬಿಟ್ಟು ಬರುವಷ್ಟು ದೊಡ್ಡವರಾಗಬೇಡಿ.. ಬದುಕು ಅನ್ನೋದು ಬೇರೆಯೇ ಇದೆ.. ಕೇವಲ ಮೂರು ದಿನದ ಆಸೆಯಲ್ಲ ಎಂಬುದು ನೆನಪಿರಲಿ..